ಈ ಬಾರಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ವಸಂತ ಬಂಗೇರ ಅವರು ಸ್ಪರ್ಧೆ ಮಾಡಲ್ಲ.
ಬೆಳ್ತಂಗಡಿಯಲ್ಲಿ ವಸಂತ ಬಂಗೇರ ಅವರ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತಾಡಿದ ವಿರೋಧ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ಬಾರಿ ಚುನಾವಣೆಗೆ ನಿಲ್ಲಲ್ಲ ಎಂದು ನನ್ನ ಬಳಿ ವಸಂತ ಬಂಗೇರ ಅವರು ಹೇಳಿದ್ದಾರೆ. ಆದರೆ ಆರೋಗ್ಯ ಸರಿ ಇದ್ದರೆ ಈ ಬಾರಿಯೂ ನಿಲ್ಲಲು ಹೇಳಿದ್ದೇನೆ
ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಮೂಲಕ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂಗೆ ಟಿಕೆಟ್ ಸಿಗುವುದು ಖಚಿತವಾಗಿದೆ.
ವಸಂತ ಬಂಗೇರರ ಗುಣಗಾನ:
ನಾನು ಕಂಡ ವಸಂತ ಬಂಗೇರಾ ಮತ್ತು ಪುಸ್ತಕದಲ್ಲಿರುವ ಬಂಗೇರರಿಗೆ ವ್ಯತ್ಯಾಸ ಇಲ್ಲ. ಪುಸ್ತಕದ ಲೇಖಕರು ಸತ್ಯವನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನಾನು ಮತ್ತು ವಸಂತ ಬಂಗೇರ ವಿಧಾನಸಭೆ ಪ್ರವೇಶಿಸಿದ್ದು ಒಟ್ಟಿದೆ. ಅವರು ಬಿಜೆಪಿಯಿಂದ ಗೆದ್ದರು, ನಾನು ಸ್ವತಂತ್ರವಾಗಿ ಗೆದ್ದು ಬಂದೆ ಆವತ್ತು ಬಿಜೆಪಿಯಲ್ಲಿ 18 ಜನ ಗೆದ್ದು ಬಂದಿದ್ದರು. ಯಡಿಯೂರಪ್ಪನೂ ಆವತ್ತೇ ಗೆದ್ದು ಬಂದಿದ್ದು, ವಿ.ಎಸ್.ಆಚಾರ್ಯ ಬಿಜೆಪಿ ನಾಯಕ ಆಗಿದ್ದರು.
ಬಾಹ್ಯವಾಗಿ ಕೆಲವರು ಮನುಷ್ಯರ ಥರ ಇರ್ತಾರೆ, ಆದರೆ ಒಳಗೆ ಮೃಗವಾಗಿರ್ತಾರೆ. ಅಂತಹ ಬಹಳ ರಾಜಕಾರಣಿಗಳಿದ್ದಾರೆ. ನಿಮ್ಮ ಜಿಲ್ಲೆಯಲ್ಲೂ ಇದ್ದಾರೆ, ಆದರೆ ನಾನು ಹೆಸರು ಹೇಳಲ್ಲ. ಅಂಥವರ ಮಧ್ಯೆ ಮನುಷ್ಯತ್ವ ಇದ್ದ ರಾಜಕಾರಣಿ ವಸಂತ ಬಂಗೇರ.
ಬಂಗೇರರನ್ನು ಮಂತ್ರಿ ಮಾಡಬೇಕಿತ್ತು:
ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಅವರ ಜೊತೆ ಬಹಳ ಸಲುಗೆ ಇತ್ತು. ಐದು ವರ್ಷಗಳಲ್ಲಿ ಒಮ್ಮೆಯೂ ಸ್ವಂತ ಕೆಲಸಕ್ಕೆ ಬಂದಿಲ್ಲ. ಅವರು ಮಂತ್ರಿ ಮಾಡಿ ಅಂತಾನೂ ಕೇಳಿಲ್ಲ, ಆದರೆ ನಾವು ಮಾಡಿಲ್ಲ. ರಮಾನಾಥ್ ರೈ, ಸೊರಕೆ ಇದ್ದ ಕಾರಣ ಮಂತ್ರಿ ಮಾಡಲು ಆಗಲಿಲ್ಲ. ನಾವು ಇಂಥ ನಿಷ್ಠುರ ವ್ಯಕ್ತಿಯನ್ನ ಮಂತ್ರಿ ಮಾಡಬೇಕಿತ್ತು.
ಬಂಗೇರ ಐದು ಬಾರಿ ಶಾಸಕರಾಗಿದ್ದರು, ಆದರೆ ನಮಗೆ ಮಂತ್ರಿ ಮಾಡಲು ಆಗಿಲ್ಲ. ಮಂತ್ರಿ ಮಾಡಲು ಅರ್ಹವಾಗಿರೋ ವ್ಯಕ್ತಿ ವಸಂತ ಬಂಗೇರ. ಈ ಬಾರಿ ಚುನಾವಣೆಗೆ ನಿಲ್ಲಲ್ಲ ಅಂತ ನನ್ನ ಬಳಿ ಹೇಳಿದ್ದಾರೆ. ಆದರೆ ಆರೋಗ್ಯ ಸರಿ ಇದ್ದರೆ ಈ ಬಾರಿಯೂ ನಿಲ್ಲಲು ಹೇಳಿದ್ದೇನೆ.
ಕಳೆದ ಬಾರಿ ಬಂಗೇರರನ್ನ ಸೋಲಿಸಿ ಬಿಟ್ಟರು. ಇವರು ಎಲ್ಲಾ ಧರ್ಮವನ್ನ ಒಪ್ಪಿಕೊಂಡ ಒಬ್ಬ ರಾಜಕಾರಣಿ. ನಮಗೆ ನಮ್ಮ ಧರ್ಮದ ಮೇಲೆ ನಿಷ್ಠೆ ಇರಬೇಕು, ಬೇರೆ ಧರ್ಮದ ಮೇಲೆ ಗೌರವ ಇರಲಿ. ಹಿಂದೂ ಧರ್ಮದ ಮೇಲೆ ನಿಷ್ಠೆ ಇರಬೇಕು, ಇಸ್ಲಾಮ್ ಸೇರಿ ಎಲ್ಲವನ್ನೂ ಗೌರವಿಸಬೇಕು. ಸಂವಿಧಾನದ ಬಗ್ಗೆ ಗೌರವ ಇಲ್ಲದೇ ಇದ್ದರೆ ಅಂಥವರು ರಾಜಕಾರಣಿ ಆಗಬಾರದು. ಎಂಎಲ್ಎ, ಎಂಪಿ ಏನೂ ಆಗಲು ಅಂಥವರು ಅರ್ಹರಲ್ಲ ಸಂವಿಧಾನ ಬದಲಾವಣೆ ಮಾಡ್ತೀನಿ ಅನ್ನೋರು ದೇಶಭಕ್ತರು ಅಂತ ಹೇಳಲು ಅರ್ಹರಲ್ಲ. ನಮ್ಮ ನಿಲುವಿನಲ್ಲಿ ನಮಗೆ ಸ್ಪಷ್ಟತೆ ಇರಬೇಕು, ಅಂಥ ಸ್ಪಷ್ಟ ವ್ಯಕ್ತಿ ಬಂಗೇರ
ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಸಂತ ಬಂಗೇರ ಅವರನ್ನು ಗುಣಗಾನ ಮಾಡಿದ್ದಾರೆ.
ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....
ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್ ಪತ್ನಿ ಜಿಲ್ ಬಿಡೆನ್ಗೆ ಪ್ರಧಾನಿ...