ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಹಣ ಮತ್ತು ಗೌರವ ಗಳಿಸಲು ಬಯಸುತ್ತಾರೆ. ಆದ್ರೆ ಇದು ಕೆಲವರಿಗೆ ಕನಸು ನಾನಸಾಗುತ್ತದೆ. ಇನ್ನು ಕೆಲವರಿಗೆ ಕನಸು ಹಾಗೆ ಉಳಿದುಬಿಡುತ್ತದೆ. ಹೀಗಾಗಿ ಮನೆಯಲ್ಲಿ ಸಣ್ಣ-ಪುಟ್ಟ ವಾಸ್ತು ಸಮಸ್ಯೆಗಳಿದ್ದರೆ, ನಾವು ಏನು ಮಾಡಿದ್ರೂ ವೃದ್ಧಿಸುವುದಿಲ್ಲ.
ಈ ತಪ್ಪುಗಳು ನಿಮ್ಮ ಯೋಗಕ್ಷೇಮಕ್ಕೆ ಅಡ್ಡಿಯಾಗುತ್ತವೆ. ಮನೆಯಲ್ಲಿ ಸಂತೋಷಕ್ಕೂ ತೊಂದರೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಮಾಡುತ್ತಿರುವ ಆ ಸಣ್ಣ ತಪ್ಪುಗಳು ಯಾವುವು? ಅವುಗಳನ್ನು ಹೇಗೆ ಸರಿಪಡಿಸುವುದು ಎಂದು ತಿಳಿದುಕೊಳ್ಳುವುದು ಉತ್ತಮ.
ಜ್ಯೋತಿಷ್ಯ ತಜ್ಞರ ಪ್ರಕಾರ, ಯಾವ ದೋಷವು ಆರ್ಥಿಕ ನಷ್ಟ ಸೇರಿದಂತೆ ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೊಣ
ಪೊರಕೆಯು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ಪೊರಕೆಯನ್ನು ಒದೆಯುವುದು ಮತ್ತು ಪೊರಕೆಯನ್ನು ಸರಿಯಾದ ಸ್ಥಳದಲ್ಲಿ ಇಡದಿದ್ದರೆ ಬಡತನ ಎದುರಾಗುತ್ತದೆ. ಪೊರಕೆಯನ್ನು ಎಂದಿಗೂ ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಮುರಿದ ಅಡುಗೆ ಪಾತ್ರೆಗಳನ್ನು ಮನೆಯಲ್ಲಿ ಸಂಗ್ರಹಿಸುವುದು ಸಹ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾವುದೇ ಪ್ರಗತಿ ಇರುವುದಿಲ್ಲ. ಆದಾಯ ಹೆಚ್ಚಾಗುವುದಿಲ್ಲ.
ಮನೆಯಲ್ಲಿ ಜೇಡಗಳು ಸೇರುವ ಸಾಧ್ಯತೆ ಹೆಚ್ಚು. ಕ್ರಮೇಣ ಅವು ಮನೆಯಲ್ಲಿರುವವರಿಗೆ ಬಡತನಕ್ಕೆ ಕಾರಣವಾಗುತ್ತವೆ. ಆದ್ದರಿಂದ, ಜೇಡವು ಮನೆಯಲ್ಲಿ ಕಟ್ಟದಂತೆ ಮನೆಯನ್ನು ಸ್ವಚ್ಛವಾಗಿಡಬೇಕು. ಅಲ್ಲದೆ, ಪಕ್ಷಿಗಳು ಮನೆಯಲ್ಲಿ ಗೂಡು ಕಟ್ಟಲು ಸಲಹೆ ನೀಡಲಾಗುತ್ತದೆ.