ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇದಾ ಕೃಷ್ಣಮೂರ್ತಿ (Veda KrishnaMoorthy Engagment) ಹಾಗೂ ಅರ್ಜುನ್ ಹೊಯ್ಸಳ ಅವರು ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುವ ಶುಭ ಸುದ್ದಿ ನೀಡಿದ್ದಾರೆ.
ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿಯವರಿಗೆ (Veda KrishnaMoorthy Engagment) ಅರ್ಜುನ್ ಹೊಯ್ಸಳ ಅವರು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ವೇದಾ ಕೃಷ್ಣಮೂರ್ತಿಯವರೂ ಸಮ್ಮತಿ ನೀಡಿದ್ದಾರೆ ಎಂದು ಅರ್ಜುನ್ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬರೆದು ಪ್ರೇಮ ನಿವೇದನೆ ಮಾಡುತ್ತಿರುವ ಪೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್ಗೆ ಆಟಗಾರ್ತಿ ‘ಮಿಥಾಲಿ ರಾಜ್’ ನಿವೃತ್ತಿ ಘೋಷಣೆ
ಈ ಪೋಟೋಗಳಿಗೆ ಸಾಮಾಜಿಕ ಜಾಲತಾಣಿಗರು ಅಭಿನಂದಿಸಿ, ಶುಭ ಹಾರೈಸುತ್ತಿದ್ದಾರೆ. ಈ ಜೋಡಿಯ ನಿಶ್ಚಿತಾರ್ಥ ಮುಂದಿನ ವಾರ ನಡೆಯಲಿದೆ ಎಂಬ ಬಗ್ಗೆ ತಿಳಿದುಬಂದಿದೆ.
30 ವರ್ಷದ ಆಟಗಾರ್ತಿ ವೇದಾ ಕೃಷ್ಣಮೂರ್ತಿಯವರು 18 ನೇ ವಯಸ್ಸಿನಲ್ಲಿಯೇ ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. 32 ವರ್ಷದ ಅರ್ಜುನ್ ಹೊಯ್ಸಳ 2016 ರಲ್ಲಿ ಕರ್ನಾಕಟದ ಪರವಾಗಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ. ಇದನ್ನೂ ಓದಿ : ಮಹಿಳಾ ವಿಶ್ವಕಪ್ನಲ್ಲಿ ವಿಶ್ವದಾಖಲೆ : ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಜೂಲನ್ ಗೋಸ್ವಾಮಿ