ಐಪಿಎಲ್ ಕ್ರಿಕೆಟ್ ಸರಣಿಯ ಡಿಜಿಟಲ್ ಮಾಧ್ಯಮದಲ್ಲಿ ಪ್ರಸಾರದ ಹಕ್ಕನ್ನು ಉದ್ಯಮಿ ಮುಖೇಶ್ ಅಂಬಾನಿ ಒಡೆತನದ Viacom18 ಹರಾಜಿನಲ್ಲಿ ಗೆದ್ದುಕೊಂಡಿದೆ. ಡಿಜಿಟಲ್ ಹಕ್ಕಿನ ಖರೀದಿಗಾಗಿ ಅಂಬಾನಿ ಕಂಪನಿ ಬಿಸಿಸಿಐ ನಡೆಸಿದ್ದ ಹರಾಜಿನಲ್ಲಿ 20,500 ಕೋಟಿ ರೂಪಾಯಿ ಬಿಡ್ ಸಲ್ಲಿಸಿ ಗೆದ್ದಿದೆ.
2023ರಿಂದ ಐದು ವರ್ಷಗಳವರೆಗೆ ಡಿಜಿಟಲ್ ಮತ್ತು ಟಿವಿ ಹಕ್ಕನ್ನು ಬಿಸಿಸಿಐ ಪ್ರತ್ಯೇಕವಾಗಿ ಮಾರಾಟ ಮಾಡಿದೆ.
ಟಿವಿ ಮತ್ತು ಡಿಜಿಟಲ್ ಹಕ್ಕು 44,075 ಕೋಟಿ ರೂಪಾಯಿ ಮಾರಾಟವಾಗಿದೆ. ಈ ಮೂಲಕ ಒಂದೊAದು ಐಪಿಎಲ್ ಮ್ಯಾಚ್ಗೂ 107 ಕೋಟಿ ರೂಪಾಯಿಗೆ ಖರೀದಿ ಪ್ರಸಾರದ ಹಕ್ಕನ್ನು ಖರೀದಿಸಲಾಗಿದೆ.
ಟಿವಿಗಳಲ್ಲಿ ಒಂದು ಮ್ಯಾಚ್ಗೆ ಪ್ರಸಾರದ ಹಕ್ಕು ಪಡೆಯಲು 50 ಕೋಟಿ ರೂಪಾಯಿ ಬಿಡ್ ಆಗಿದ್ದರೆ, ಡಿಜಿಟಲ್ನಲ್ಲಿ 57 ಕೋಟಿ ರೂಪಾಯಿ ಬಿಡ್ ಆಗಿದೆ.
ವಾಯಾಕಾಮ್18, ಡಿಸ್ನಿ ಹಾಟ್ಸ್ಟಾರ್, ಸೋನಿ ಮತ್ತು ಝೀ ಪ್ರಸಾರದ ಹಕ್ಕಿಗಾಗಿ ಬಿಡ್ಡಿಂಗ್ ಸಲ್ಲಿಸಿದ್ದವು.