1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ಅಮಾನುಷ ದಾಳಿ, ನರಮೇಧವನ್ನು ದಿ ಕಾಶ್ಮೀರ್ ಫೈಲ್ಸ್ ಹೆಸರಿನಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತೆರೆಗೆ ತಂದಿದ್ದರು. ಈ ಬಗ್ಗೆ ಹಲವು ಟೀಕೆ ಟಿಪ್ಪಣಿ, ವಿರೋಧ, ಮೆಚ್ಚುಗೆಗಳ ನಡುವೆ ಬಾಕ್ಸ್ ಆಫೀಸ್ ನಲ್ಲಿ ಬಿಗ್ ಹಿಟ್ ಎನಿಸಿಕೊಂಡಿತ್ತು.
ಈ ವಿವಾದಾತ್ಮಕ ಸಿನೆಮಾ ವಿರುದ್ಧ ಒಂದಿಷ್ಟು ಹೋರಾಟಗಾರರನ್ನು ಬಿಟ್ರೆ ಖ್ಯಾತನಾಮ ನಟರು, ಸೆಲೆಬ್ರಿಟಿಗಳು ಮಾತನಾಡದೆ ಸೈಲೆಂಟ್ ಆಗಿ ಇದ್ದಿದ್ದೇ ಹೆಚ್ಚು.ವಿರೋಧಿಸಬೇಕು, ಮಾತನಾಡಬೇಕು ಎಂದುಕೊಂಡವರು ಸಹ ಬಲಪಂಥಿಯ ಟ್ರೋಲರ್ ಗಳ ಕೈಗೆ ಸಿಕ್ಕಿ ಫಜೀತಿ ಅನುಭವಿಸಬೇಕು ಎಂದು ಸುಮ್ಮನಾದವರ ಸಂಖ್ಯೆ ಹೆಚ್ಚು. ಇಂತಹ ಹೊತ್ತಲ್ಲಿ ಲೇಡಿ ಪವರ್ ಸ್ಟಾರ್ ಖ್ಯಾತಿಯ ನಟಿ ಸಾಯಿ ಪಲ್ಲವಿ ತಮಗೆ ಅನಿಸಿದ್ದನ್ನು ನಿರ್ಭಡೆಯಿಂದ ಹೊರಗಡೆ ಹೇಳಿದ್ದಾರೆ.
ಶುಕ್ರವಾರ ರಿಲೀಸ್ ಆಗುತ್ತಿರುವ ವಿರಾಟಪರ್ವಮ್ ಸಿನೆಮಾ ಪ್ರಮೋಷನ್ ಭಾಗವಾಗಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಯಿ ಪಲ್ಲವಿ ಆಡಿರುವ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿವೆ.
‘‘ಕೆಲ ದಿನಗಳ ಹಿಂದೆ ‘The Kashmir Files’ ಎಂಬ ಸಿನೆಮಾ ರಿಲೀಸ್ ಆಯ್ತಲ್ಲ.. 1990ರಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲ್ಪಟ್ಟರು ಎಂಬುದನ್ನು ಈ ಸಿನೆಮಾದಲ್ಲಿ ತೋರಿಸಲಾಗಿದೆ. ಆ ಸಮಯದಲ್ಲಿ ಕಾಶ್ಮೀರದಲ್ಲಿ ನೆಲೆಸಿದ್ದ ಕಾಶ್ಮೀರಿ ಪಂಡಿತರನ್ನು ಹೆಂಗೆ ಕೊಂದರು ಎಂದು ತೋರಿಸಲಾಗಿದೆ ಅಲ್ಲವಾ? ಕೋವಿಡ್ ಕಾಲದಲ್ಲಿ ಅಂದುಕೊಳ್ತೀನಿ.. ಹಸುವನ್ನು ತೆರಳಿಸುತ್ತಿದ್ದ ವಾಹನ ತಡೆಯುತ್ತಾರೆ. ಆ ವಾಹನದ ಚಾಲಕ ಓರ್ವ ಮುಸ್ಲಿಂ ವ್ಯಕ್ತಿ. ಜೈ ಶ್ರೀರಾಮ್ ಎಂದು ಬಲವಂತವಾಗಿ ಆತನ ಬಾಯಿಂದ ಹೇಳಿಸಿದರು. ಕೆಲವರು ದಾಳಿ ಕೂಡಾ ಮಾಡಿದರು. ಕಾಶ್ಮೀರ್ ಫೈಲ್ಸ್ ಸಿನೆಮಾದಲ್ಲಿ ತೋರಿಸಿದ ಆ ಘಟನೆ, ಈ ಘಟನೆಗಳ ನಡುವೆ ವ್ಯತ್ಯಾಸವೇನಿದೆ. ಆ ಎರಡು ಘಟನೆಗಳ ಪೈಕಿ ಯಾವೊಂದು ಘಟನೆಯಲ್ಲಿ ನಮ್ಮ ತಂದೆ ಇದ್ದಿದ್ದರೂ ನನಗೆ ನೋವಾಗುತ್ತಿತ್ತು. ಈ ಎರಡು ಘಟನೆಗಳಲ್ಲಿ ಹಿಂಸೆ ಇದೆ. ನಮ್ಮ ಗೋಮಾತೆಯನ್ನು ಹೇಗೆ ಕೊಲ್ಲುತ್ತೀರಿ ಎಂಬುದು ಹಿಂದೂಗಳ ಪ್ರಶ್ನೆ ಮತ್ತು ನೋವು. ಅದೇ ರೀತಿ ಕಾಶ್ಮೀರದ ಮುಸ್ಲಿಮರದ್ದು ಕೂಡಾ ಇದು ನಮ್ಮ ಊರು ಎಂಬ ನಂಬಿಕೆ’’
ಎಂದು ಸಾಯಿ ಪಲ್ಲವಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಮೂಲಕ ಬಲ ಪಂಥಿಯರ ಹಿಂಸಾತ್ಮಕ ಕೃತ್ಯಗಳನ್ನು ಖಂಡಿಸಿದ್ದಾರೆ. ಅವರವರ ನಂಬಿಕೆ ದೊಡ್ಡದು.. ಅದನ್ನು ಗೌರವಿಸಬೇಕು.. ಎಂದಿದ್ದಾರೆ. ಇಲ್ಲಿ ಬಲಪಂಥಿಯರು ಎಂದರೇ ಹಿಂದುತ್ವವಾದಿಗಳು ಆಗುತ್ತಾರೆ. ಮುಸ್ಲಿಂ ಅತೀವಾದಿಗಳು ಆಗುತ್ತಾರೆ.