ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.. ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸಿ ತುಂಬಾ ಮಂದಿ ಈ ಮೇಲಿನ ವಾಕ್ಯವನ್ನು ಬಳಸುತ್ತಾರೆ. ಮುಖ್ಯವಾಗಿ ಅಧ್ಯಕ್ಷ ಪುಟಿನ್ ಚೇಷ್ಟೆಗಳನ್ನು ಟೀಕಿಸುವವರೇ ಹೆಚ್ಚು. ಅಮೇರಿಕ ಸೇರಿ ಪಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಿದರೂ ಪುಟಿನ್ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆನೆ ನಡೆದಿದ್ದೇ ಹಾದಿ ಎನ್ನುತ್ತಿದ್ದಾರೆ. ಅಷ್ಟಕ್ಕೂ ಪುಟಿನ್ ಇಷ್ಟು ಪವರ್ ಫುಲ್ ಆಗಿ ಬೆಳೆದಿದ್ದು ಹೇಗೆ..? ಪುಟಿನ್ ಬಗ್ಗೆ ನಿಮಗೆ ತಿಳಿಯದ ಸಾಕಷ್ಟು ಸಂಗತಿಗಳನ್ನು ಪ್ರತಿಕ್ಷಣ ಸ್ಪೆಷಲ್ ನಲ್ಲಿ ನೋಡೋಣ.
►1952ರಲ್ಲಿ ಇಂದಿನ ಲೆನಿನ್ ಗ್ರಾಡ್ ನಲ್ಲಿ ಒಂದು ಸಾಮಾನ್ಯ ಕುಟುಂಬದಲ್ಲಿ ಜನನ. ಇಂದು ಓರ್ವ ಅಸಾಧಾರಣ ವ್ಯಕ್ತಿಯಾಗಿ ಇಡೀ ಜಗತ್ತೇ ಈತನನ್ನು ಗುರುತಿಸುತ್ತಿದೆ.
► ಪುಟಿನ್ ಪಡೆದಿದ್ದು ಕಾನೂನು ಶಿಕ್ಷಣ. ಆದರೆ ಆರಿಸಿಕೊಂಡ ಕೆಲಸ ಮಾತ್ರ ಸೋವಿಯಟ್ ಯೂನಿಯನ್ ನ ಸೀಕ್ರೆಟ್ ಏಜೆನ್ಸಿ ಕೆಜಿಬಿಯಲ್ಲಿ. 1975ರಿಂದ 1990ರ ನಡುವಿನ ಅವಧಿಯಲ್ಲಿ ಏಜೆಂಟ್, ಲೆಫ್ಟಿಂನೆಂಟ್ ಕರ್ನಲ್ ಆಗಿ ಕೆಲಸ ಮಾಡಿದ್ದರು.
►ಸೋವಿಯಟ್ ಯೂನಿಯನ್ ಪತನ ನಂತರ ಕ್ರೆಮ್ಲಿನ್ ನಲ್ಲಿ ಕೆಲ ಕಾಲ ಕೆಲಸ ಮಾಡಿದ ಪುಟಿನ್ 1991ರಲ್ಲಿ ರಾಜಕೀಯಕ್ಕೆ ಕಾಲಿಟ್ಟರು.
► 1999ರಲ್ಲಿ ಪ್ರಧಾನಿಯಾಗಿ ಒಂದು ವರ್ಷ.. ಮರುವರ್ಷ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಅನುಭವಿಸುತ್ತಾ ಬಂದಿದ್ದಾರೆ.
►2008ರವರೆಗೂ ಅಧ್ಯಕ್ಷರಾಗಿ ಮುಂದುವರೆದು, ನಂತರ 2008ರಿಂದ 2012ರವರೆಗೂ ಪ್ರಧಾನಿ ಆಗಿದ್ದರು.2012ರಿಂದ ಮತ್ತೆ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ. ಮಾರ್ಚ್ 2018ರಲ್ಲಿ ಪುಟಿನ್ ನಾಲ್ಕನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
► ಅಧ್ಯಕ್ಷ ಹುದ್ದೆಯಲ್ಲಿ ಎರಡು ಬಾರಿ ಇರಬೇಕು ಎಂಬ ನಿಯಮದ ಕಾರಣ ಡಿಮಿತ್ರಿ ಮದ್ವೆವೆವ್ ಮತ್ತು ಪುಟಿನ್ ತಮ್ಮ ಸ್ಥಾನಗಳನ್ನು ಬದಲಿಸಿಕೊಳ್ಳುತ್ತಿದ್ದರು. ಆ ನಂತರ ಸುಧೀರ್ಘ ಅವಧಿಗೆ ಅಧ್ಯಕ್ಷ ಗಾದಿಯಲ್ಲಿ ಮುಂದುವರೆಯಲು ಪುಟಿನ್ ಕಾನೂನಿಗೆ ತಿದ್ದುಪಡಿ ತಂದರು.
►ಪುಟಿನ್ ಸಂವಿಧಾನ ತಿದ್ದುಪಡಿ ಮೂಲಕ 2036ರವರೆಗೂ ಅಧ್ಯಕ್ಷರಾಗಿ ಮುಂದುವರೆಯಲು ಸ್ಕೆಚ್ ಹಾಕಿದ್ದರು. ಆದರೆ ಇದಕ್ಕೆ ಜನರ ವಿರೋಧ ವ್ಯಕ್ತವಾಗಿತ್ತು.
► ರಷ್ಯಾ ಗೆ ಸೇರಿದ ಗಾಜ್ ಪ್ರೊಮ್.. ಯುರೋಪ್ ಒಕ್ಕೂಟಕ್ಕೆ ಅತಿದೊಡ್ಡ ಗ್ಯಾಸ್ ಪೂರೈಕೆದಾರ ಸಂಸ್ಥೆ. EUಗೆ ಗ್ಯಾಸ್ ಪೈಪ್ ಮೂಲಕ ಪೂರೈಕೆ ವಿಚಾರ ಪುಟಿನ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಹೆಚ್ಚಿಸಿತು.
► 2013-16ರ ಮಧ್ಯೆ ನಾಲ್ಕು ಬಾರಿ ಜಗತ್ತಿನ ಅತ್ಯಂತ ಪವರ್ ಫುಲ್ ವ್ಯಕ್ತಿಯಾಗಿ ಆಯ್ಕೆ ಆಗಿದ್ದರು ಎಂದರೇ ಅರ್ಥ ಮಾಡಿಕೊಳ್ಳಿ ಪುಟಿನ್ ತಾಕತ್ತು.
► ವಿಶ್ವದ ದೊಡ್ಡಣ್ಣ ಆಗುವ ಕದನದಲ್ಲಿ ಅಮೇರಿಕಾಗೆ ನೇರವಾಗಿ ಟಾರ್ಗೆಟ್ ಮಾಡುತ್ತಿದೆ ರಷ್ಯಾ. 2017ರಲ್ಲಿ ಅಮೇರಿಕಾ ಅಧ್ಯಕ್ಷಿಯ ಚುನಾವಣೆಯಲ್ಲಿ ಮಧ್ಯ ಪ್ರವೇಶಿಸಿದ್ದ ಆರೋಪವೂ ಪುಟಿನ್ ಮೇಲೆ ಬಂದಿತ್ತು. ಇದನ್ನು ಪುಟಿನ್, ಟ್ರಂಪ್ ಇಬ್ಬರು ಖಂಡಿಸಿದ್ದರು.
► ಪುಟಿನ್ 69ನೇ ವಯಸ್ಸಿನಲ್ಲೂ ಫಿಟ್ ಆಗಿರಲು ಸಾಕಷ್ಟು ಕಾರಣಗಳಿವೆ. ಡಯೆಟ್, ವ್ಯಾಯಾಮದಿಂದ ಹಿಡಿದು ಜಿಂಕೆಯ ಕೊಂಬಿನಿಂದ ತೆಗೆದ ರಕ್ತದಲ್ಲಿ ಸ್ನಾನ ಮಾಡುವುದರಿಂದಲೇ ಪುಟಿನ್ ಇಷ್ಟು ಬಲಿಷ್ಠವಾಗಿ ಇರಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ. ಇದಕ್ಕಾಗಿಯೇ ಪುಟಿನ್ ಯಾವಾಗಲೂ ರಷ್ಯಾದ ಅಲ್ತಾಯ್ ಪರ್ವತ ಪ್ರದೇಶಕ್ಕೆ ಹೋಗುತ್ತಾ ಇರುತ್ತಾರೆ.
► ಪುಟಿನ್ 2014ರಲ್ಲಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮಿನೆಟ್ ಆಗಿದ್ದರು. ಸಿರಿಯಾ ಮೇಲಿನ ಅಮೇರಿಕ ದಾಳಿಯನ್ನು ನಿಲ್ಲಿಸುವಲ್ಲಿ ಪುಟಿನ್ ಪ್ರಮುಖ ಪಾತ್ರ ವಹಿಸಿದ್ದರು. ರಾಸಾಯನಿಕ ಅಸ್ತ್ರಗಳನ್ನು ನಾಶ ಮಾಡುವಂತೆ ಸಿರಿಯಾ ದೇಶವನ್ನು ಒಪ್ಪಿಸುವಲ್ಲಿ ಪುಟಿನ್ ಯಶಸ್ವಿ ಆಗಿದ್ದರು.
►ಪುಟಿನ್ ಗೆ ರಷ್ಯಾ ಮಾತ್ರವಲ್ಲ. ಇಡೀ ಜಗತ್ತಿನಾದ್ಯಂತಅಭಿಮಾನಿಗಳು ಇದ್ದಾರೆ. ಸ್ವತಃ ಬಲಶಾಲಿ ಆಗಿರುವ ಪುಟಿನ್ ಆಗಾಗ ಹೊಸ ಹೊಸ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
►ಪುಟಿನ್ ಸಿಕ್ಸ್ ಪ್ಯಾಕ್ ಪ್ರಿಯ. ಡಯೆಟ್ ಗುಟ್ಟನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ವಿಹಾರ ಯಾತ್ರೆಗಳಿಗೆ ಕಡಿಮೆ ಭದ್ರತಾ ಸಿಬ್ಬಂದಿಯೊಂದಿಗೆ ತೆರಳುತ್ತಾರೆ. ರಷ್ಯಾದ ಇಂಟೆಲಿಜೆನ್ಸ್ ವ್ಯವಸ್ಥೆ ಬಲಿಷ್ಠ ಇರುವ ಕಾರಣದಿಂದಲೇ ಪುಟಿನ್ ಅಷ್ಟು ಆರಾಮಾಗಿ ಸುತ್ತುತಾರೆ.
►ಪುಟಿನ್ ಯುದ್ಧದ ರುಚಿಕಂಡಿರುವ ಹುಲಿಯಂತೆ. ಪುಟಿನ್ ಅವಧಿಯಲ್ಲೇ ನಾಲ್ಕು ಬಾರಿ ಯುದ್ಧ ನಡೆದಿದೆ. ಈಗ ನಡೆಯುತ್ತಿರುವುದು ಐದನೇಯದ್ದು.
►ಕೊರೋನಾ ಸಂದರ್ಭದಲ್ಲಿ ವೈರಸ್ ಬಾರದೆ ಇರಲೆಂದು, ಡಿಸ್ ಇನ್ಫೆಕ್ಷನ್ ಭಾರಿ ಸುರಂಗವನ್ನೇ ಏರ್ಪಡಿಸಿಕೊಂಡಿದ್ದರು
►ರಷ್ಯಾ ಸಾಮ್ರಾಜ್ಯ ವಿಸ್ತರಣೆಯ ಆಕಾಂಕ್ಷೆಯಿಂದಲೇ ಉಕ್ರೇನ್ ಮೇಲೆ ಪುಟಿನ್ ಯುದ್ಧ ಸಾರಿದ್ದಾರೆ ಎಂಬುದು ಅಮೇರಿಕ ಮಾಡುವ ಆರೋಪ.2021ರಲ್ಲಿ ಉಕ್ರೇನ್ ದೇಶವನ್ನು ರಷ್ಯಾದ ಕೀರೀಟ ಎಂದು ಪುಟಿನ್ ಹೇಳಿದ್ದ ಮಾತನ್ನು ಇಲ್ಲಿ ಅಮೇರಿಕಾ ಉಲ್ಲೇಖ ಮಾಡುತ್ತದೆ.
►ಲೂಡ್ಮಿಲ್ಲ ಅಲೆಕ್ಸಾ0ದ್ರನ ಜೊತೆ 1983ರಲ್ಲಿ ಪುಟಿನ್ ವಿವಾಹ, 2014ರಲ್ಲಿ ವಿಚ್ಚೇದನ. ಈ ಜೋಡಿಗೆ ಮರಿಯಾ, ಕ್ಯಾತೇರಿನ ಎಂಬ ಹೆಣ್ಮಕ್ಕಳಿವೆ. ರಷ್ಯಾದ ಮೀಡಿಯಾ ಮೊಘಲ್ ರೂಪಾರ್ಟ್ ಮರ್ಡೂಕ್ ಮಾಜಿ ಪತ್ನಿ ವೆಂಡಿ ಡೆಂಗ್ ಸೇರಿ ಹಲವರ ಜೊತೆ ಪುಟಿನ್ ಡೇಟಿಂಗ್ ಮಾಡಿದ್ದಾರೆ ಎಂಬ ಸುದ್ದಿಗಳಿವೆ.
►ಫುಟ್ಬಾಲ್ ಅಂದ್ರೆ ಪುಟಿನ್ ಗೆ ಸಿಕ್ಕಾಪಟ್ಟೆ ಇಷ್ಟ. ಸಾಕು ಪ್ರಾಣಿಗಳು ಅಂದರೆ ಮಮಕಾರ. ಮೀಡಿಯಾ ಮ್ಯಾನೇಜ್ಮೆಂಟ್ ನಲ್ಲೂ ಎತ್ತಿದ ಕೈ.
►ಆಡಳಿತದ ವಿಚಾರದಲ್ಲಿ ಪುಟಿನ್ ಮೇಲೆ ದೂರುಗಳಿಲ್ಲ. ಆದರೆ, ವಿದೇಶಾಂಗ ನೀತಿ, ಆಯುಧ ಒಪ್ಪಂದ, ವಿದೇಶಿ ವ್ಯವಹಾರದಲ್ಲಿ ಮೂಗು ತೂರಿಸುವ ವಿಚಾರದಲ್ಲಿ ತಮ್ಮ ಪ್ರಜೆಗಳಿಂದಲೇ ಟೀಕೆ ಎದುರಿಸಿದ್ದಾರೆ.
► ಪುಟಿನ್ ಊಹೆಗೆ ನಿಲುಕದ ವ್ಯಕ್ತಿ. ಅವರ ಮುಖದ ಭಾವನೆಗಳನ್ನು ಗುರುತಿಸುವುದು ಕಷ್ಟ. ತಮ್ಮ ಹಾವ ಭಾವ ಗಳ ಮೂಲಕ ಎದುರಿಗಿದ್ದವರನ್ನು ಪಲ್ಟಿ ಹೊಡೆಸುವುದರಲ್ಲಿ ಪುಟಿನ್ ಎತ್ತಿದ ಕೈ.
►ಅಧ್ಯಕ್ಷರ ಭವನಕ್ಕಿಂತಲೂಹೆಚ್ಚು ಹೊರಗೆ ತಿರಗುತ್ತಾರೆ.. ಬೇಕಂತಲೇ ಶೋ ಕೊಡುತ್ತಾರೆ. ಕೊರೆವ ಚಳಿಯಲ್ಲಿ.. ಮಂಜುಗಡ್ಡೆಗಳ ನಡುವೆ ತಣ್ಣೀರು ಸ್ನಾನ, ಮೈದಾನದಲ್ಲಿ ಇಳಿದು ಆಟ ಆಡುವುದು, ಅರಣ್ಯದಲ್ಲಿ ಬೇಟೆ.. ಕರಾಟೆ, ಪವರ್ ಪಂಚ್… ಹೀಗೆ ಅಸಾಧಾರಣವಾದ, ಅಪಾಯಕಾರಿಯಾದ ಸ್ಟಂಟ್ ಮಾಡುವ ಮೂಲಕ ತಮ್ಮನ್ನು ತಾವು ಮಾಚೋ ಮ್ಯಾನ್ ಆಗಿ, ಸೂಪರ್ ಹೀರೋ ಎಂದು ಬಿಂಬಿಸಿಕೊಳ್ಳಲು ಪ್ರಯತ್ನ ನಡೆಸುತ್ತಾರೆ ಎಂಬ ವಾದ ಕೂಡ ಇದೆ.
►ಪುಟಿನ್ ರನ್ನು ಗ್ರಿಗೋರಿ ರಸ್ ಪುಟಿನ್ ವಾರಸುದಾರ ಎಂದು ಕೆಲವರು ಭಾವಿಸುತ್ತಾರೆ. ಆದರೆ ಅವರಿಬ್ಬರಿಗೂ ಸಂಬಂಧವಿಲ್ಲ. ಪುಟಿನ್ ಮೇಲೆ ರಷ್ಯಾದಲ್ಲಿ ಸಿಕ್ಕಾಪಟ್ಟೆ ಹಾಡುಗಳಿವೆ. ಜೊತೆಗೆ ಸಿಕ್ಕಾಪಟ್ಟೆ ಜೋಕು, ಮೆಮ್ಸ್ ಕೂಡಾ ವಿಪರೀತವಾಗಿ ವೈರಲ್ ಆಗುತ್ತವೆ.