ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಜೆಡಿಎಸ್ಗೆ ಮತ್ತೊಂದು ಆಘಾತ. ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕೆಂಚಪ್ಪ ಗೌಡ ಆಯ್ಕೆ ಆಗಿದ್ದಾರೆ.
ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸಂಬಂಧಿ ಸಿ ಎನ್ ಬಾಲಕೃಷ್ಣ ಅವರು ಸೋಲು ಅನುಭವಿಸಿದ್ದಾರೆ.
ಬಾಲಕೃಷ್ಣ ಅವರ ವಿರುದ್ಧ ಕೆಂಚಪ್ಪ ಗೌಡ ಬಣ ಅವಿಶ್ವಾಸ ನಿರ್ಣಯ ಮಂಡಿಸಿತ್ತು.
2022ರ ಜನವರಿಯಲ್ಲಿ ಬಾಲಕೃಷ್ಣ ಅವರು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ 21 ಮತಗಳನ್ನು ಪಡೆದು ಬಾಲಕೃಷ್ಣ ಅವರು ಆಯ್ಕೆ ಆಗಿದ್ದರು.
ಆದರೆ ಇವತ್ತು ಬಾಲಕೃಷ್ಣ ಅವರ ವಿರುದ್ಧ 35 ಮಂದಿ ನಿರ್ದೇಶಕರಲ್ಲಿ 18 ಮಂದಿ ಅವಿಶ್ವಾಸ ನಿರ್ಣಯ ಪರ ಮತ ಹಾಕುವುದರೊಂದಿಗೆ ಒಕ್ಕಲಿಗರ ಸಂಘದಲ್ಲಿ ಜೆಡಿಎಸ್ ಹಿಡಿತ ಕೈ ತಪ್ಪಿದೆ.
ADVERTISEMENT
ADVERTISEMENT