ಜನಸಾಮಾನ್ಯರ ಮನೆ ಬಜೆಟ್ ಮೇಲೆ ರಷ್ಯಾ – ಉಕ್ರೇನ್ ಯುದ್ಧದ ಕಿಡಿ ಬಿದ್ದಿದೆ. ಯುದ್ಧ ಆರಂಭವಾದ ದಿನದಿಂದಲೂ ಸೀಮೆಂಟ್, ಕಬ್ಬಿಣ ಸಿಕ್ಕಾಪಟ್ಟೆ ತುಟ್ಟಿಯಾಗಿದೆ. ದಿನದಿಂದ ದಿನಕ್ಕೆ ಕಟ್ಟಡ ನಿರ್ಮಾಣ ಉತ್ಪನ್ನಗಳ ಬೆಲೆ ಹೆಚ್ಚುತ್ತಲೇ ಇದೆ.
ಕೇವಲ 20ದಿನದ ಅವಧಿಯಲ್ಲಿ ಸೀಮೆಂಟ್ ಮೇಲೆ 80-100 ರೂಪಾಯಿಯಷ್ಟು ಹೆಚ್ಚಾಗಿದೆ. ಒಂದು ಟನ್ ಕಬ್ಬಿಣದ ಬೆಲೆ 15ಸಾವಿರದಿಂದ 20ಸಾವಿರ ರೂಪಾಯಿವರೆಗೂ ಹೆಚ್ಚಾಗಿದ್ದು, ಜನಸಾಮಾನ್ಯರು, ರಿಯಲ್ ಎಸ್ಟೇಟ್ ಉದ್ಯಮಿಗಳು ತತ್ತರಿಸಿದ್ದಾರೆ.
ಜನವರಿಯಲ್ಲಿ ಟನ್ ಕಬ್ಬಿಣದ ಬೆಲೆ 64ಸಾವಿರ ಇತ್ತು. ಈಗ ಟನ್ ಕಬ್ಬಿಣದ ಕನಿಷ್ಠ ಬೆಲೆ 81ಸಾವಿರ. ಪ್ರಮುಖ ಕಂಪನಿಗಳ ಕಬ್ಬಿಣವಾದರೆ 90ಸಾವಿರಕ್ಕೂ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚುವ ಸಂಭವ ಇದೆ.
ಡಿಸೆಂಬರ್ ನಲ್ಲಿ 50KG ಸೀಮೆಂಟ್ ಚೀಲದ ಬೆಲೆ 300ರೂಪಾಯಿ ಇತ್ತು. ಜನವರಿ ಅಂತ್ಯದ ವೇಳೆಗೆ 280ರುಪಾಯಿಗೆ ಇಳಿದಿತ್ತು. ಆದರೆ ಮನೆ ನಿರ್ಮಾಣ ಹೆಚ್ಚಳ ಮತ್ತು ಯುದ್ಧದ ಕಾರಣ, ಈಗ ಒಂದು ಚೀಲ ಸೀಮೆಂಟ್ ಬೆಲೆ 380 ರೂಪಾಯಿ ದಾಟಿದೆ. ಯಾವುದೇ ದಿನ ಇದು 200ರೂಪಾಯಿ ದಾಟಬಹುದು.
ಡೀಸೆಲ್ ಬೆಲೆ ಹೆಚ್ಚಾದಲ್ಲಿ ಕಟ್ಟಡ ನಿರ್ಮಾಣ ಉತ್ಪನ್ನಗಳ ಬೆಲೆ ಮತ್ತಷ್ಟು ಹೆಚ್ಚಬಹುದು ಎಂಬ ಆತಂಕವಿದೆ.