ADVERTISEMENT
ವಿಶ್ವ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ಭಾರಿ ಮುಜುಗರವನ್ನು ಎದುರಿಸುವಂತಾಗಿದೆ. ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
1975,1979ರಲ್ಲಿ ಸತತವಾಗಿ ಎರಡು ಬಾರಿ ವಿಶ್ವಕಪ್ ಸಾಧಿಸಿದ್ದ ವೆಸ್ಟ್ ಇಂಡೀಸ್ ಇದೀಗ ವಿಶ್ವಕಪ್ಗೆ ಅರ್ಹತೆ ಸಾಧಿಸುವಲ್ಲಿ ವಿಫಲವಾದ ತಂಡ ಎಂಬ ಹಣೆ ಪಟ್ಟಿ ಹೊತ್ತಿದೆ.
ಇಂತಹ ಸನ್ನಿವೇಶ ಸೃಷ್ಟಿಯಾಗಿರುವುದು ಕಳೆದ 48 ವರ್ಷಗಳಲ್ಲಿ ಇದೆ ಮೊದಲು.
ಶನಿವಾರ ನಡೆದ ಸೂಪರ್ ಸಿಕ್ಸ್ ಕ್ವಾಲಿಫೈಯರ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಏಳು ವಿಕೆಟ್ಗಳ ಅಂತರದಲ್ಲಿ ಹೀನಾಯವಾಗಿ ಸೋಲನುಭವಿಸಿತು.
ಈ ಮೂಲಕ ಏಕದಿನ ವಿಶ್ವಕಪ್ಗೆ ಅರ್ಹತೆ ಸಾಧಿಸುವಲ್ಲಿ ವಿಫಲವಾಯ್ತು.
ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 43.5 ಓವರ್ಗಳಲ್ಲಿ ಕೇವಲ 181 ರನ್ ಗಳಿಸಿತು.
ಈ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ 42.3 ಓವರ್ಗಳಲ್ಲಿ ಇನ್ನೂ ಏಳು ವಿಕೆಟ್ ಇರುವಂತೆಯೇ ಗೆದ್ದು ಬೀಗಿತು.
ADVERTISEMENT