ಸಾಮಾನ್ಯವಾಗಿ ಯಾರೇ ಆಗಲಿ ಟ್ಯಾಂಕ್ ಖಾಲಿ ಆದಲ್ಲಿ ಮಾತ್ರ ಪೆಟ್ರೋಲ್ ಬಂಕ್ಗೆ ಹೋಗುತ್ತಾರೆ.ಆದರೆ, ದೇಶಾದ್ಯಂತ ಇರುವ ಯಾವುದೇ ಪೆಟ್ರೋಲ್ ಬಂಕ್ ಆದರೂ ಸರಿ ಈ ಆರೂ ಸೇವೆಗಳನ್ನು ಉಚಿತವಾಗಿ ಹೊಂದಬಹುದಾಗಿದೆ. ಅವುಗಳನ್ನು ಹೊಂದುವುದು ಪ್ರತಿಯೊಬ್ಬರ ಹಕ್ಕು. ಅವು ಏನು ಎಂಬುದನ್ನು ನೋಡೋಣ
* ನಿಮ್ಮ ವಾಹನದಲ್ಲಿನ ಪೆಟ್ರೋಲ್, ಡೀಸೆಲ್ ಗುಣಮಟ್ಟದ ಬಗ್ಗೆ ನಿಮಗೆ ಅನುಮಾನ ಇದ್ದಲ್ಲಿ ಯಾವುದೇ ಬಂಕ್ಗಾದರೂ ಹೋಗಿ ಗುಣಮಟ್ಟ ಪರೀಕ್ಷೆ ನಡೆಸುವ ವಸ್ತುಗಳನ್ನು ಪಡೆಯಬಹುದು.
* ಯಾವಾಗ ರಸ್ತೆ ಅಪಘಾತ ಆಗುತ್ತೆ ಎನ್ನುವುದು ಗೊತ್ತಿರುವುದಿಲ್ಲ. ಅದಕ್ಕೆ ಪ್ರತಿಯೊಂದು ಬಂಕ್ನಲ್ಲಿ ಫಸ್ಟ್ ಏಡ್ ಕಿಟ್ ಇರಿಸುವುದು ಕಡ್ಡಾಯವಾಗಿದೆ. ತುರ್ತು ಸಂದರ್ಭದಲ್ಲಿ ಇದನ್ನು ಉಚಿತವಾಗಿ ಬಳಸಬಹುದು.
* ಪೆಟ್ರೋಲ್ ಬಂಕ್ನಲ್ಲಿ ಸೆಲ್ಫೋನ್ ಬಳಸಬಾರದು. ಆದರೆ ತುರ್ತು ಸಂದರ್ಭಗಳಲ್ಲಿ ಪೆಟ್ರೋಲ್ ಬಂಕ್ನ ಟೆಲಿಫೋನ್ ಅನ್ನು ಉಚಿತವಾಗಿ ಬಳಸಿಕೊಳ್ಳಬಹುದು.
* ಪ್ರಯಾಣ ವೇಳೆ ಟಾಯ್ಲೆಟ್ ಉಪಡಯೋಗಿಸುವ ಸಂದರ್ಭ ಬಂದಲ್ಲಿ ಹಿಂದೆ ಮುಂದೆ ನೋಡದೇ ಸನಿಹದ ಪೆಟ್ರೋಲ್ ಬಂಕ್ನ ಶೌಚಾಲಯವನ್ನು ಬಳಸಬಹುದಾಗಿದೆ. ಇಲ್ಲಿಯ ವಾಷ್ ರೂಂ ಎಲ್ಲರಿಗೂ ಉಚಿತ.
* ಪ್ರತಿಯೊಂದು ಬಂಕ್ನಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬೇಕಾದ ಜವಾಬ್ದಾರಿ ಬಂಕ್ ಮಾಲಿಕರ ಮೇಲಿರುತ್ತದೆ. ಅಲ್ಲಿಯೇ ನೀರನ್ನು ಕುಡಿಯಬಹುದು. ಬಾಟಲ್ಗೂ ತುಂಬಿಸಬಹುದಾಗಿದೆ. ಇದಕ್ಕೆ ಯಾವುದೇ ಬಿಲ್ ನೀಡುವಂತಿಲ್ಲ.
* ಬಂಕ್ನಲ್ಲಿ ಟೈರ್ಗಳಿಗೆ ಗಾಳಿ ತುಂಬಿಸುವಾಗ ಹಣ ನೀಡಬೇಡಿ. ಅದು ನಿಮಗೆ ಸಂಪೂರ್ಣವಾಗಿ ಲಭ್ಯವಾಗುವ ಉಚಿತ ಸೇವೆ. ಈ ಸೇವೆಯನ್ನು ಅಲ್ಲಿನ ಸಿಬ್ಬಂದಿ ನಿರಾಕರಿಸಿದಲ್ಲಿ ಬಂಕ್ ಮಾಲಿಕರಿಗೆ ದೂರು ನೀಡಬಹುದು.