ವಾಟ್ಸ್ಯಾಪ್ ಕಂಪೆನಿ ದಿನದಂದ ದಿನಕ್ಕೆ ಹಲವು ಬದಲಾವಣೆಗಳನ್ನು ಮಾಡಿಕೊಂಡು ಬಳಕೆದಾರರ ಸ್ನೇಹಿಯಾಗಿ ಬದಲಾಗುತ್ತದೆ.
ವಾಟ್ಸ್ಯಾಪ್ ಬಳಕೆದಾರರ ಇದುವರೆಗಿನ ಸಮಸ್ಯೆಯೊಂದನ್ನು ಕಂಪೆನಿ ಇದೀಗ ನೀಗಿಸಿದೆ. ವಾಟ್ಸ್ಯಾಪ್ ಬೆಟಾ, ವಾಟ್ಸ್ಯಾಪ್ ನಲ್ಲಿ ಇದುವರೆಗೂ ಇದ್ದ ಫೈಲ್ ಟ್ರಾನ್ಸ್ಪರ್ ಲಿಮಿಟ್ ಅನ್ನು 2 ಜಿಬಿ ವರೆಗೆ ಹೆಚ್ಚಿಸಿದೆ.
ಈ ಮೊದಲ ವಾಟ್ಸ್ಯಾಪ್ ನಲ್ಲಿ ಕೇವಲ 100 ಎಂಬಿ ವರೆಗೆ ಮಾತ್ರ ಫೈಲ್ಸ್ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿತ್ತು. ಇದೀಗ, 2 ಜಿಬಿ ವರೆಗೆ ಫೈಲ್ಸ್ ಅಥವಾ ವೀಡಿಯೋಗಳನ್ನು ಶೇರ್ ಮಾಡಬಹುದಾಗಿದೆ. ಈ ಮೂಲಕ ಬಳಕೆದಾರ ಇದುವರೆಗಿನ ಪ್ರಮುಖ ಸಮಸ್ಯೆಯಾಗಿದ್ದ ಫೈಲ್ಸ್ ಟ್ರಾನ್ಸ್ಪರ್ ಲಿಮಿಟ್ನ್ನು ವಾಟ್ಸ್ಯಾಪ್ ಹೆಚ್ಚಳ ಮಾಡಿದೆ.
ಅಲ್ಲದೇ, ಗುಂಪಿನ ಸದಸ್ಯರ ಮಿತಿಯನ್ನು 256 ಜನರಿಂದ 512 ಜನರ ವರೆಗೆ ಹೆಚ್ಚಳ ಮಾಡಿದೆ.