ಫೇಸ್ಬುಕ್ ಒಡೆತನದ ವಾಟ್ಸಾಪ್ ದಿನೇ ದಿನೇ ಅಪ್ಡೇಟ್ ಆಗುತ್ತಲೇ ಇದೆ. ಇದೀ, ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ವೈಶಿಷ್ಟ್ಯವನ್ನು ಶೀಘ್ರವೇ ಪರಿಚಯಿಸಲಿದೆ.
ವಾಟ್ಸಾಪ್ ಬಳಕೆದಾರರು ತಮ್ಮ ಲಾಸ್ಟ್ ಸೀನ್ ಸ್ಟೇಟಸ್ (ಕೊನೆಯ ಸೂಚಕ) ನಲ್ಲಿ ಹಲವು ಬದಲಾವಣೆ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ವಾಟ್ಸಾಪ್ನ ಈ ನೂತನ ಸೌಲಭ್ಯ ಬಳಕೆದಾರರು ತಮ್ಮ ಲಾಸ್ಟ್ ಸೀನ್ ಯಾರೆಲ್ಲ ನೋಡಬಹುದು ಎಂಬುದನ್ನು ನಿಯಂತ್ರಣ ಮಾಡಬಹುದಾಗಿದೆ.
ಪ್ರಸ್ತುತ, ವಾಟ್ಸಾಪ್ನ ಲಾಸ್ಟ್ ಸೀನ್ ಗೆ ಸಂಬಂಧಿಸಿದಂತೆ 2 ಆಯ್ಕೆಗಳನ್ನು ನೀಡಿದೆ. ಮೊದಲ ಆಯ್ಕೆ ನಮ್ಮ ವಾಟ್ಸಾಪ್ನ ಲಾಸ್ಟ್ ಸೀನ್ (ಕೊನೆಯ ಸೂಚಕ) ಅನ್ನು ಎಲ್ಲರೂ ನೋಡಬಹುದು. ಎರಡನೆಯದು ಯಾರು ನೋಡಲು ಸಾಧ್ಯವಾಗದಂತೆ ನಿರ್ಬಂಧಿಸುವುದು.
ಇದೀಗ, ವಾಟ್ಸಾಪ್ನ ಈ ನೂತನ ಸೌಲಭ್ಯದಿಂದ ನಮ್ಮ ಇಷ್ಟದವರಿಗೆ ಮಾತ್ರ ನಮ್ಮ ಲಾಸ್ಟ್ ಸೀನ್ ನೋಡಲು ಸಾಧ್ಯವಾಗುವಂತೆ ಮಾಡಿಕೊಳ್ಳಬಹುದಾಗಿದೆ.