ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿರುವ ಕಾಂತಾರ (Kantara)ಸಿನಿಮಾ ಈಗ ತೆಲುಗು-ಹಿಂದಿಯಲ್ಲಿ ತೆರೆ ಕಾಣಲು ಸಜ್ಜಾಗುತ್ತಿದೆ. ಇದಕ್ಕೆ ಅಕ್ಟೋಬರ್ 15ರಂದು ಮಹೂರ್ತ ಫಿಕ್ಸ್ ಆಗಿದೆ. ಎಲ್ಲರೂ ರಿಷಬ್ ಶೆಟ್ಟರ (Rishabh shetty)ಫರ್ಮಾರ್ಫೆಮ್ಸ್ ಬಗ್ಗೆ ಮಾತಾಡುತ್ತಿದ್ದಾರೆ. ಜೊತೆಗೆ ನಾಯಕಿ ಸಪ್ತಮಿ ಗೌಡ (Actress Saptami Gowda) ನಟನೆ ಕೂಡ ಏನು ಕಮ್ಮಿ ಇಲ್ಲ ಎಂಬ ಮಾತು ಕೇಳಿಬರುತ್ತಿದೆ.
ಸಪ್ತಮಿ ಗೌಡ ಬಗ್ಗೆ ಒಂದಿಷ್ಟು ಚುಟುಕು ಮಾಹಿತಿ ಇಲ್ಲಿದೆ.
ಸಪ್ತಮಿ ಗೌಡ.. ತಮ್ಮ ಎರಡನೇ ಸಿನಿಮಾದಲ್ಲಿಯೇ ಬಿಗ್ಗೆಸ್ಟ್ ಹಿಟ್ ಪಡೆದುಕೊಂಡಿದ್ದಾರೆ.
ಸಪ್ತಮಿ ಗೌಡ 1996ರ ಜೂನ್ 8ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ತಂದೆ ಉಮೇಶ್ ಎಸ್ಕೆ ದೊಡ್ಡಿ (ACP Umesh Sk Doddi) ಬೆಂಗಳೂರಿನಲ್ಲಿ ಎಸಿಪಿಯಾಗಿದ್ದಾರೆ.
26 ವರ್ಷದ ಸಪ್ತಮಿಗೌಡ ಬೆಂಗಳೂರಿನ ಬಿಐಟಿಯಲ್ಲಿ (BIT) ಸಿವಿಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ.
2020ರಲ್ಲಿ ರಿಲೀಸ್ ಆದ ಪಾಪ್ಕಾರ್ನ್ ಮಂಕಿ ಟೈಗರ್ನಲ್ಲಿ (popcorn Monkey Tiger)ಗಿರಿಜಾ ಪಾತ್ರದಲ್ಲಿ ನಟಿಸಿದ್ದರು.
ಈಗ ಕಾಂತಾರ (Kantara) ಚಿತ್ರದಲ್ಲಿ ಲೀಲ ಪಾತ್ರದಲ್ಲಿ ಸಪ್ತಮಿ ಗೌಡ (Saptami Gowda ) ಕಾಣಿಸಿಕೊಂಡಿದ್ದಾರೆ.
ಡ್ಯಾನ್ಸ್, ಬುಕ್ ರೀಡಿಂಗ್, ಟ್ರಾವೆಲ್ ಮಾಡೋದು ಅಂದರೇ ಸಪ್ತಮಿಗೌಡಗೆ ತುಂಬಾನೆ ಇಷ್ಟ.
ಅಂದ ಹಾಗೇ, ಸಪ್ತಮಿಗೌಡ ರಾಷ್ಟ್ರಮಟ್ಟದ ಸ್ವಿಮ್ಮರ್ ಕೂಡ.
ಫಿಟ್ನೆಸ್ಗೆ ಸಿಕ್ಕಾಪಟ್ಟೆ ಇಂಪಾರ್ಟೆನ್ಸ್ ಕೊಡುವ ಸಪ್ತಮಿಗೌಡ.. ನಿತ್ಯ ಜಿಮ್ಗೆ ತೆರಳಿ ವರ್ಕೌಟ್ ಮಾಡುತ್ತಾರೆ.