ಭಾರತೀಯ ಯುವಕ, ಯುವತಿಯರಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದ ( Heart Attack ) ಪ್ರಮಾಣ ಹೆಚ್ಚುತ್ತಿದೆ. ನಿನ್ನೆಯಷ್ಟೇ ಬಿಜೆಪಿಯ ನಾಯಕಿ ಹಾಗೂ ನಟಿ ಸೋನಲಿ ಪೊಗಾಟ್ ತಮ್ಮ ಮಧ್ಯವಯಸ್ಸಿನಲ್ಲಿಯೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.
ಯಾರು ಈ ಸೋನಾಲಿ ಪೊಗಾಟ್..?
ಸೋನಾಲಿ ಪೊಗಾಟ್ ಬಿಜೆಪಿ ನಾಯಕಿ ಹಾಗೂ ಟಿಕ್ ಟಾಕ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಅದಂಪುರದಲ್ಲಿ ಸ್ಪರ್ಧಿಸಿ ಸೋತಿದ್ದರು. ಇವರು ಮಂಗಳವಾರ ಗೋವಾದಲ್ಲಿ ತಮ್ಮ 42 ನೇ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೀಡಾಗಿ ( Heart Attack ) ಸಾವನ್ನಪ್ಪಿದ್ದಾರೆ. ಹರಿಯಾಣ ಬಿಜೆಪಿ ಮುಖ್ಯಸ್ಥ ಧನ್ಕರ್ ಅವರು ಈ ಸಾವನ್ನು ದೃಡೀಕರಿಸಿದ್ದಾರೆ.
ಸೋನಾಲಿ ಪೊಗಾಟ್ ಕೇವಲ 42 ವಯಸ್ಸಿನಲ್ಲಿಯೇ ಹೃದಯಾಘಾತಕ್ಕೀಡಾದ ಬೆನ್ನಲ್ಲೇ, ಮಧ್ಯವಯಸ್ಕರು ಹಾಗೂ ಯುವಕರಲ್ಲಿನ ಹೃದಯಾಘಾತದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ.
ಮಧ್ಯವಯಸ್ಸಿನಲ್ಲಿ ಹೃದಯಾಘಾತಕ್ಕೀಡಾದ ಸೆಲೆಬ್ರಿಟಿಗಳು :
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಧ್ಯವಯಸ್ಕರ ಹೃದಯಾಘಾತದ ಸಾವಿನಲ್ಲಿ ಸಿನೆಮಾ ಸೆಲೆಬ್ರಿಟಿಗಳ ಪ್ರಮಾಣ ದೊಡ್ಡದಿದೆ. 30 ಮತ್ತು 40 ನೇ ವಯಸ್ಸಿನಲ್ಲಿಯೇ ಹಲವು ಸೆಲೆಬ್ರಿಟಿಗಳು ಹೃದಯಾಘಾತ ( Heart Attack ) ಹಾಗೂ ಹೃದಯ ಸ್ತಂಭನದ ಸಮಸ್ಯೆಗೀಡಾಗುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಕನ್ನಡದ ನಟ
ಚಿರು ಸರ್ಜಾ (35),
ಪುನೀತ್ ರಾಜ್ಕುಮಾರ್(46),
ರಿತುಪರ್ಣೋ ಘೋಷ್(49),
ರಾಜ್ ಕೌಶಲ್ (49),
ವಿವೇಕ್ ಶೌಕ್ (47),
ಸಿದ್ದಾರ್ಥ್ ಶುಕ್ಲಾ (40) ಮತ್ತಿತರರು.
21 ನೇ ಶತಮಾನದಲ್ಲಿ ಮಧ್ಯವಯಸ್ಕರ ಹಾಗೂ ಯುವಕರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಳವಾಗಿದೆ. ಅದರಲ್ಲೂ ಪ್ರಮುಖವಾಗಿ ಈ ಹೃದಯಾಘಾತದ ಸಮಸ್ಯೆ ಭಾರತವನ್ನು ಹೆಚ್ಚಾಗಿ ಭಾಧಿಸುತ್ತಿದೆ.
ಇದನ್ನೂ ಓದಿ : ನಟಿ, ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹೃದಯಾಘಾತದಿಂದ ನಿಧನ
ಯುವ ಭಾರತೀಯರು ಮತ್ತು ಹೃದಯಾಘಾತದ ಹೆಚ್ಚಳ :
ವಾಸ್ಕ್ಯುಲರ್ ಹೆಲ್ತ್ ಜರ್ನಲ್ ( Voscular Health Journal) ನಲ್ಲಿ ಭಾರತೀಯ ಸಂಶೋಧಕರಾದ ಮೀನಾಕ್ಷಿ ಶರ್ಮಾ ಮತ್ತು ನಿರ್ಮಲ್ ಕುಮಾರ್ ಗಂಗೂಲಿ ಎನ್ನುವವರು ಭಾರತದ ಯುವವರ್ಗದಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಬಗ್ಗೆ ಸಂಶೋಧನಾ ವರದಿಯನ್ನು ಪ್ರಕಟಿಸಿದ್ದಾರೆ.
ಈ ವರದಿಯಲ್ಲಿ, 35 ರಿಂದ 45 ವರ್ಷದೊಳಗಿನ ಭಾರತೀಯ ಯುವ ವರ್ಗ ಅಕಾಲಿಕ ಪರಿಧಮನಿಯ ಕಾಯಿಲೆ (premature Coronary Artery Disease (CAD)) ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಮತ್ತು ಇದೇ ಖಾಯಿಲೆಗೆ ವಿಶ್ವದ ಬೇರೆ ಭಾಗದ ಜನರ ಸಾವನ್ನಪ್ಪುವ 10 ರಿಂದ 15 ವರ್ಷಗಖ ಮುಂಚೆಯೇ ಭಾರತೀಯರು ಮರಣಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಪಾಶ್ಚಿಮಾತ್ಯ ಜನ ಹೃದಯಾಘಾತಕ್ಕೀಡಾಗುವ ಸರಾಸರಿ 20 ವರ್ಷಕ್ಕಿಂತ ಮುಂಚೆಯೇ ಭಾರತೀಯರು ಹೃದಯಾಗಾತಕ್ಕೀಡಾಗುತ್ತಿದ್ದಾರೆ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.
ಅಕಾಲಿಕ ಹೃದಯಾಘಾತಕ್ಕೆ ಕಾರಣಗಳು..?
ಹುದ್ರೋಗ ತಜ್ಙರ ಪ್ರಕಾರ, ಬಹುತೇಕ ಹೃದಯಾಘಾತದ ಪ್ರಕರಣಗಳಿಗೆ ವಂಶವಾಹಿ ಮತ್ತು ಆಧುನಿಕ ಲೈಪ್ ಸ್ಟೈಲ್ ಕಾರಣ ಎಂದು ಹೇಳುತ್ತಿದ್ದಾರೆ. ಬಹುತೇಕ ಭಾರತೀಯ ಕುಟುಂಬಗಳು ಮೆಟಾಬಾಲಿಕ್ ಸಿಂಡ್ರೋಮ್ ಅಥವಾ ಹೃದಯಾಘಾತಕ್ಕೆ ಸಂಬಂಧಿಸಿದ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಕಿಬ್ಬೊಟ್ಟೆಯ ಸ್ಥೂಲಕಾಯತೆ, ರಕ್ತದಲ್ಲಿನ ಸಕ್ಕರೆ (Blood Sugur), ಮಧುಮೇಹ, ಕೊಲೆಸ್ಟ್ರಾಲ್ ನಂತಹ ಖಾಯಿಲೆಗಳನ್ನು ಒಟ್ಟಾಗಿ ಮೆಟಾಬಾಲಿಕ್ ಸಿಂಡ್ರೋಮ್ (metabolic syndrome) ಎಂದು ಕರೆಯಲಾಗುತ್ತದೆ.
ಮೆಟಾಬಾಲಿಕ್ ಸಿಂಡ್ರೋಮ್ ಗಳ ಜೊತೆಗೆ ಇತರ ಕಾರಣಗಳೂ ಹೃದಯಾಘಾತಕ್ಕೆ ಕಾರಣವಾಗಿವೆ. ಪ್ರಮುಖವಾಗಿ, ಜೀವನಶೈಲಿಯ ಬದಲಾವಣೆಗಳು, ಹೆಚ್ಚಿನ ಕಾರ್ಬೋಹೈಡ್ರೇಟ್ ಸೇವನೆ, ಹೆಚ್ಚಿನ ಮಾನಸಿಕ ಒತ್ತಡ, ಶಕ್ತಿ ಪಾನೀಯಗಳ ಸೇವನೆ, ಮದ್ಯಪಾನ, ತಂಬಾಕು ಮತ್ತು ನಿದ್ರೆಯ ಅಭಾವದಂತಹ ಸಮಸ್ಯೆಗಳು ಕಾರಣವಾಗಿವೆ.
ಇದನ್ನೂ ಓದಿ : ತಮಿಳು ನಟ ವಿಕ್ರಮ್ಗೆ ಹೃದಯಾಘಾತ
ಭಾರತೀಯ ಯುವವರ್ಗವನ್ನು ಹೃದಯಾಘಾತದಿಂದ ರಕ್ಷಿಸುವುದು ಹೇಗೆ..?
20 ವರ್ಷದಿಂದ 40 ರ ನಡುವಿನ ಭಾರತೀಯರು ಪ್ರತಿ ಐದು ವರ್ಷಗಳಿಗೊಮ್ಮೆ ಮತ್ತು 40 ರ ನಂತರ ವಾರ್ಷಿಕವಾಗಿ ಸಂಪೂರ್ಣ ಲಿಪಿಡ್ ಪ್ರೊಫೈಲ್ ಮತ್ತು ಉಪವಾಸದ ರಕ್ತದ ಗ್ಲೂಕೋಸ್ (lipid profile and fasting blood glucose test) ಪರೀಕ್ಷೆಗಳಿಗೆ ಒಳಗಾಗಲು ಶಿಫಾರಸು ಮಾಡಲಾಗಿದೆ. ಈ ಫಲಿತಾಂಶಗಳ ಆಧಾರದ ಮೇಲೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಬೇಕು.
ನಮ್ಮ ದೈನಂದಿನ ಆಹಾರದಲ್ಲಿ ಸಕ್ಕರೆ, ಉಪ್ಪು ಮತ್ತು ವಿವಿಧ ರೀತಿಯ ಕೊಬ್ಬಿನ ಮಟ್ಟವನ್ನು ನಿರ್ವಹಿಸುವುದು ಸಹ ಹೃದಯಾಘಾತದ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಹೃದ್ರೋಗ ತಜ್ಞರು ಹೇಳುವಂತೆ, ಹೃದಯಾಘಾತವನ್ನು ತಡೆಗಟ್ಟುವುದು ಅಪಾಯದ ಮಟ್ಟ ಕಡಿಮೆ ಮಾಡಲು ಸಹಾಯವಾಗುತ್ತದೆ.
ಇದನ್ನೂ ಓದಿ : ಪುನೀತ್ ರಾಜ್ಕುಮಾರ್ ನಿಧನದ ಸುದ್ದಿ ಕೇಳಿ ಅಭಿಮಾನಿಗೆ ಹೃದಯಾಘಾತ: ಸಾವು