ಟ್ರೈನ್ ನಂಬರ್ 17015 – ಭುವನೇಶ್ವರದಿಂದ ಸಿಕಿಂದ್ರಾಬಾದ್ ನಡುವೆ ಸಂಚರಿಸುವ ವಿಶಾಖ ಎಕ್ಸ್ಪ್ರೆಸ್
ಒಟ್ಟು 22 ಬೋಗಿಗಳಿರುವ ಈ ರೈಲಿನಲ್ಲಿ ಥರ್ಡ್ ಎಸಿ ಬೋಗಿಗಳು 10, ಸೆಕೆಂಡ್ ಎಸೆ 4, ಫಸ್ಟ್ ಕ್ಲಾಸ್ ಎಸಿ ಬೋಗಿ ಒಂದು ಇದೆ. ಅಂದರೆ, ಎಸಿ ಬೋಗಿಗಳ ಸಂಖ್ಯೆ 15. ಸ್ಲೀಪರ್ ಬೋಗಿಗಳು ಇರುವುದು ಮಾತ್ರ ಕೇವಲ ಮೂರು. ಜನರಲ್ ಬೋಗಿಗಳು 2, ವಿಕಲಚೇತನರು, ಮಹಿಳೆಯರಿಗೆ ಒಂದು ಬೋಗಿ.. ಇನ್ನೊಂದನ್ನು ಜನರೇಟರ್, ಲಗೇಜ್ಗಾಗಿ ಬಳಸುತ್ತಿದ್ದಾರೆ.
ಅಂದ ಹಾಗೇ, ಈ ಮೊದಲು ವಿಶಾಖ ಎಕ್ಸ್ಪ್ರೆಸ್ನಲ್ಲಿ 12 ಸ್ಲೀಪರ್ ಬೋಗಿ ಇದ್ದವು. ಇವುಗಳ ಸಂಖ್ಯೆಯನ್ನು ಈಗ ಮೂರಕ್ಕೆ ಇಳಿಸಲಾಗಿದೆ.
ಟ್ರೈನ್ ನಂಬರ್ 18045 – ಶಾಲಿಮಾರ್ – ಹೈದ್ರಾಬಾದ್ ನಡುವೆ ಸಂಚರಿಸುವ ಈಸ್ಟ್ ಕೋಸ್ಟ್ ಎಕ್ಸ್ಪ್ರೆಸ್
ಸುದೀರ್ಘ ಸಮಯದಿಂದ ಇರುವ ಈ ರೈಲಿನಲ್ಲಿ ಪ್ರಸ್ತುತ ಏಳು ಸ್ಲೀಪರ್ ಬೋಗಿಗಳು ಮಾತ್ರ ಇವೆ. ಈ ರೈಲಿನಲ್ಲಿ 11 ಎಸಿ ಕೋಚ್ಗಳಿವೆ. ಜನರಲ್ ಬೋಗಿ ಇರುವುದು ಕೇವಲ ಒಂದು. ವಿಕಲಚೇತನರು, ಮಹಿಳೆಯರಿಗೆ ಒಂದು ಬೋಗಿ.. ಇನ್ನೊಂದು ಬೋಗಿ ಜನರೇಟರ್, ಲಗೇಜ್ಗಾಗಿ ಮೀಸಲಾಗಿದೆ.
ವಿಶಾಖಪಟ್ಟಣ-ಕಡಪಾ ನಡುವೆ ಸಂಚರಿಸುವ ತಿರುಮಲ ಎಕ್ಸ್ಪ್ರೆಸ್ನಲ್ಲಿ ಈ ಹಿಂದೆ 10 ಸ್ಲೀಪರ್ ಕೋಚ್ಗಳಿದ್ದವು. ಈಗ ಏಳಕ್ಕೆ ಇಳಿದಿದೆ. ಹೀಗೆ ಎಕ್ಸ್ಪ್ರೆಸ್ ರೈಲುಗಳಲ್ಲಿ ಸ್ಲೀಪರ್ ಕೋಚ್ಗಳ ಸಂಖ್ಯೆಯನ್ನು ರೈಲ್ವೇ ಇಲಾಖೆ ಸದ್ದಿಲ್ಲದೇ ಇಳಿಕೆ ಮಾಡುತ್ತಿದೆ.
ದಕ್ಷಿಣ ರೈಲ್ವೇ ಕೂಡ ಜನರಲ್ ಮತ್ತು ಸ್ಲೀಪರ್ ಕೋಚ್ಗಳನ್ನು ಎಸಿ ಕೋಚ್ಗಳಾಗಿ ಮಾಪಾರ್ಡುವ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಇಲ್ಲಿಯೂ ಸ್ಲೀಪರ್ ಕೋಚ್ಗಳನ್ನು ಕಡಿಮೆ ಮಾಡಿ ಎಸಿ ಕೋಚ್ಗಳನ್ನು ಹೆಚ್ಚಿಸಲಾಗುತ್ತಿದೆ.
ಟ್ರೈನ್ ನಂಬರ್ 16347/16348 ತಿರುವನಂತಪುರಂ-ಮಂಗಳೂರು ಎಕ್ಸ್ಪ್ರೆಸ್ನಲ್ಲಿ ಜುಲೈ 25ರಿಂದ ಜಾರಿಗೆ ಬರುವಂತೆ ಜನರಲ್ ಕೋಚ್ಗಳ ಸಂಖ್ಯೆಯನ್ನು ಐದರಿಂದ ನಾಲ್ಕಕ್ಕೆ ಇಳಿಕೆ ಮಾಡುತ್ತಿದೆ. ಇದೇ ಮಾನದಂಡವನ್ನು ಲೋಕಮಾನ್ಯ ತಿಲಕ್ ಟೆರ್ಮಿನಸ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ರೈಲಿನಲ್ಲೂ ಅನುಸರಿಸಲಾಗುತ್ತಿದೆ.
ಸದ್ಯ ಈ ಎರಡು ರೈಲುಗಳು ತಲಾ 23 ಬೋಗಿಗಳನ್ನು ಹೊಂದಿವೆ. ಇದರಲ್ಲಿ ತಲಾ 11 ಸ್ಲೀಪರ್ ಕೋಚ್ಗಳಿವೆ. ಮೂರು ತ್ರಿ ಟೈಯರ್ ಎಸಿ ಕೋಚ್, 2 ಟು ಟೈಯರ್ ಎಸಿ ಕೋಚ್, ಮೂರು ತ್ರಿ ಟೈಯರ್ ಎಸಿ ಕೋಚ್, ಐದು ಜನರಲ್, 2 ಜನರಲ್ ಕಮ್ ಲಗ್ಗೇಜ್ ಬೋಗಿಗಳಿವೆ.
ಇನ್ನು, ವಿಶಾಖಪಟ್ಟಣ-ಹೈದ್ರಾಬಾದ್ ನಡುವೆ ಸಂಚರಿಸುವ, ಯಾವಾಗಲು ಪ್ರಯಾಣಿಕರಿಂದ ತುಂಬಿ ತುಳುಕುವ ಗೋದಾವರಿ ಎಕ್ಸ್ಪ್ರೆಸ್ನಲ್ಲಿಯೂ ಸ್ಲೀಪರ್ ಕೋಚ್ಗಳ ಸಂಖ್ಯೆಯನ್ನು ಇಳಿಸಲಾಗಿದೆ. ಈ ಮೊದಲು 12 ಇದ್ದ ಸ್ಲೀಪರ್ ಕೋಚ್ಗಳಲ್ಲಿ 8 ಮಾತ್ರ ಉಳಿದಿವೆ.
ಸಾಮಾನ್ಯ ಪ್ರಯಾಣಿಕರಿಗೆ ನಿತ್ಯನರಕ
ಇದರ ಪರಿಣಾಮವನ್ನು ರೈಲು ಪ್ರಯಾಣಿಕರನ್ನು ದೊಡ್ಡ ಮಟ್ಟದಲ್ಲಿಯೇ ಎದುರಿಸುತ್ತಿದ್ದಾರೆ. ಸೀಟು ಇಲ್ಲವೇ ಬೆರ್ತ್ ಸಿಗದೇ ಪ್ರಯಾಣಿಕರು ಒದ್ದಾಡುತ್ತಿದ್ದಾರೆ. ಜನೆರಲ್ ಬೋಗಿಗಳು ತುಂಬು ತುಳುಕುವ ಕಾರಣ ಸ್ಲೀಪರ್ ಕೋಚ್ಗಳಿಗೂ ಜನರಲ್ ಬೋಗಿ ಪ್ರಯಾಣಿಕರು ಹತ್ತುತ್ತಿದ್ದಾರೆ.
ಜನರಲ್ ಬೋಗಿಗಳಿಗೆ ಸಮಾನವಾಗಿ ರಿಸರ್ವ್ಡ್ ಸ್ಲೀಪರ್ ಕೋಚ್ಗಳು ತುಂಬಿ ತುಳುಕುತ್ತಿವೆ. ಮಹಿಳೆಯರು, ವೃದ್ಧರು, ಮಕ್ಕಳು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಕಡೆಗೆ ಬಾತ್ರೂಂಗಳು ಕೂಡ ಖಾಲಿ ಇರುತ್ತಿಲ್ಲ. ಇದು ರಿಸರ್ವೇಷನ್ ಮಾಡಿಸಿದ ಪ್ರಯಾಣಿಕರು, ರಿಸರ್ವೇಷನ್ ಮಾಡಿಸದ ಪ್ರಯಾಣಿಕರಿಗೂ ತೊಂದರೆ ತಂದಿದೆ.
ಎರಡು ವರ್ಷಗಳಿಂದಲೇ ಇದೆಲ್ಲಾ
ಇದೆಲ್ಲಾ ನಡೆಯುತ್ತಿರುವುದು ಕಳೆದ ಎರಡು ವರ್ಷಗಳಿಂದ.. ಮುಖ್ಯವಾಗಿ ಕೊರೋನಾ ನಂತರ ಭಾರತೀಯ ರೈಲ್ವೇ ಇಲಾಖೆ ದೊಡ್ಡ ದೊಡ್ಡ ಬದಲಾವಣೆಗಳನ್ನು ಮಾಡುತ್ತಿದೆ.
ಪ್ಯಾಸೆಂಜರ್ ರೈಲುಗಳನ್ನು ಎಕ್ಸ್ಪ್ರೆಸ್ ರೈಲು ಎಂದು ಹೆಸರು ಬದಲಿಸಿದರು. ಅದೇ ನಿಲ್ದಾಣ.. ಹೆಚ್ಚು ಕಡಿಮೆ ಅದೇ ಟೈಮಿಂಗ್… ಆದರೇ, ಟಿಕೆಟ್ ದರ ಮಾತ್ರ ಹೆಚ್ಚಳವಾಗಿದೆ. ಕೊನೆಗೆ ಮೆಮು ಟ್ರೈನ್ಗಳಿಗೂ ಎಕ್ಸ್ಪ್ರೆಸ್ ಟಿಕೆಟ್ ದರಗಳನ್ನೇ ಪಡೆಯಲಾಗುತ್ತಿದೆ.
ಸ್ಪೆಷಲ್ ರೈಲು ಹೆಸರಲ್ಲಿ ಸುಲಿಗೆ
ದೂರ ಪ್ರಯಾಣ ಮಾಡುವವರು ರಸ್ತೆ ಮಾರ್ಗಕ್ಕಿಂತ ರೈಲುಗಳನ್ನೇ ಅವಲಂಬಿಸುತ್ತಾರೆ. ಅದಕ್ಕೆ ಕಾರಣಗಳು ಹಲವು. ಜೊತೆಗೆ, ಟಿಕೆಟ್ ದರ ಕಡಿಮೆ ಆಗುತ್ತೆ.. ಕಡಿಮೆ ದುಡ್ಡಿನಲ್ಲಿ ಪ್ರಯಾಣ ಮಾಡೋದಕ್ಕೆ ರೈಲುಗಳೇ ಬೆಸ್ಟ್ ಎಂದು ಮಿಡ್ಲ್ ಕ್ಲಾಸ್ ಜನ ಆಲೋಚಿಸುತ್ತಾರೆ.
ಈಗ ರೈಲುಗಳಲ್ಲಿ ಸ್ಲೀಪರ್ ಕೋಚ್ಗಳ ಸಂಖ್ಯೆಯನ್ನು, ಜನರಲ್ ಬೋಗಿಗಳ ಸಂಖ್ಯೆಯನ್ನು ಇಳಿಕೆ ಮಾಡಿ.. ಎಸಿ ಬೋಗಿಗಳನ್ನು ಹೆಚ್ಚಿಸುತ್ತಿರುವ ಕಾರಣ ಮಧ್ಯಮವರ್ಗದ ಮಂದಿಗೆ ಹೆಚ್ಚುವರಿ ಹೊರೆಯನ್ನು ರೈಲ್ವೇ ಇಲಾಕೆ ವಿಧಿಸುತ್ತಿದೆ.
ಇದೇ ಸಮಯದಲ್ಲಿ, ಸಮಯ ಸಂದರ್ಭವನ್ನು ಅನುಸರಿಸಿ ಸ್ಪೆಷಲ್ ರೈಲುಗಳ ಹೆಸರಲ್ಲಿ ವಸೂಲಿ ಮಾಡುತ್ತಿರುವ ಪ್ರಯಾಣ ಶುಲ್ಕ ದುಬಾರಿಯಾಗಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಪೆಷಲ್ ರೈಲುಗಳ ಪ್ರಯಾಣ ದರವನ್ನು ಅತ್ಯಂತ ದಾರುಣವಾಗಿ ಹೆಚ್ಚಿಸಲಾಗುತ್ತಿದೆ. ರೆಗ್ಯುಲರ್ ರೈಲುಗಳಲ್ಲಿ ಸ್ಲೀಪರ್ ಕೋಚ್ಗಳನ್ನು ಕಡಿಮೆ ಮಾಡಿರುವ ರೈಲ್ವೇ ಇಲಾಖೆ, ಪರ್ಯಾಯವಾಗಿ ಓಡಿಸುವ ರೈಲುಗಳಲ್ಲೂ ಅದೇ ವಿಧಾನವನ್ನು ಜಾರಿ ಮಾಡಿದೆ. ಪ್ರಯಾಣ ದರ ವಿಪರೀತವಾಗುತ್ತಿದೆ. ಇನ್ನೂ ಹೇಳಬೇಕು ಎಂದರೇ, ವಂದೇ ಭಾರತ್ ರೈಲಿನ ಪ್ರಯಾಣ ದರಕ್ಕಿಂತ ಹೆಚ್ಚು ದರವನ್ನು ಸ್ಪೆಷಲ್ ರೈಲುಗಳ ಹೆಸರಲ್ಲಿ ರೈಲ್ವೇ ಇಲಾಖೆ ಪೀಕುತ್ತಿದೆ.
ರೈಲುಗಳು ಜನರ ಪ್ರಯೋಜನಾರ್ಥವಾಗಿರದೇ ಪೂರ್ತಿಯಾಗಿ ಲಾಭಕ್ಕಾಗಿಯೇ ಇವೆ ಎನ್ನುವಂತೆ ಬದಲಾಗುತ್ತಿವೆ. ಲಾಭದಾಯಕವಾದ ಸರಕು ಸಾಗಣೆ ರೈಲುಗಳಲ್ಲಿ ಕಾರ್ಪೋರೇಟ್ಗಳಿಗೆ ರಿಯಾಯ್ತಿ ನೀಡುವ ರೈಲ್ವೇ ಇಲಾಖೆ ಈ ಭಾರವನ್ನೆಲ್ಲಾ ಬಡ ಪ್ರಯಾಣಿಕರ ಮೇರೆ ಹೇರುತ್ತಿರುವುದು ಅನ್ಯಾಯ
ಎಂದು ಪ್ರಯಾಣಿಕರೊಬ್ಬರು ಆಕ್ರೋಶ ಹೊರ ಹಾಕುತ್ತಾರೆ.
ಜನಸಾಮಾನ್ಯರಿಗೆ ರೈಲ್ವೇ ದೂರ ಆಗುತ್ತಿದೆಯಾ?
ಭಾರತೀಯ ರೈಲ್ವೇ ಕ್ರಮವಾಗಿ ಜನ ಸಾಮಾನ್ಯರಿಗೆ ದೂರವಾಗುತ್ತಿದೆ ಎಂಬ ಅಭಿಪ್ರಾಯ ಬಲವಾಗುತ್ತದೆ. ಇತ್ತೀಚಿಗೆ ಆಗುತ್ತಿರುವ ಬದಲಾವಣೆಗಳೇ ಇದಕ್ಕೆ ಸಾಕ್ಷಿ. ರೈಲ್ವೇ ಇಲಾಖೆ ಮಾಡುತ್ತಿರುವ ಬದಲಾವಣೆಗಳಿಂದ ಪ್ರಯಾಣಿಕರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಆಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ರೈಲ್ವೇ ಪ್ರಯಾಣಿಕರ ಸಂಘ ಆಗ್ರಹಿಸುತ್ತಿದೆ.
ADVERTISEMENT
ADVERTISEMENT