ಮುಂದಿನ ಭಾರಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಇದೇ ನನ್ನ ಕೊನೆಯ ಚುನವಾಣೆ ಎಂದು ವಿರೋಧ ಪಕ್ಷದ ನಾಯ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯನವರು, ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ನನ್ನನ್ನು ಮತ್ತೆ ಒತ್ತಾಯ ಮಾಡಬೇಡಿ, ನಿಮ್ಮ ತಲೆಯಿಂದ ಈ ವಿಷಯವನ್ನು ತೆಗೆದುಹಾಕಿಬಿಡಿ. ನನ್ನನ್ನು ಖುಷಿಪಡಿಸಲೂ ಸಹ ಇನ್ಮುಂದೆ ಹೀಗೆ ಮಾತನಾಡಬೇಡಿ ಎಂದು ತಮ್ಮ ಕಾಂಗ್ರೆಸ್ ಕಿಆರ್ಯಕರ್ತರು ಹಾಗೂ ನಾಯಕರಿಗೆ ಹೇಳಿದ್ದಾರೆ.
ಮುಂದುರೆದು ಮಾತನಾಡಿದ ಅವರು, ಇದು ನನ್ನ ಕೊನೆಯ ಚುನಾವಣೆ. ವರುಣ, ಬಾದಾಮಿ, ಕೋಲಾರ, ಹುಣಸೂರು ಕ್ಷೇತ್ರ ಕೊಪ್ಪಳದಲ್ಲಿ ಸ್ಪರ್ಧಿಸುವಂತೆ ನನ್ನನ್ನು ಕರೆಯುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಅಂತ ಇನ್ನೂ ತೀರ್ಮಾನ ಮಾಡಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲೇ ನನ್ನ ಕೊನೆಯ ಸ್ಪರ್ಧೆಯಾಗಲಿದೆ. ಇದಾದ ಬಳಿಕ ಯಾವ ಹುದ್ದೆ ಕೊಟ್ರೂ ನಾನು ಸ್ವೀಕರಿಸುವುದಿಲ್ಲ ಎಂದು ಮೈಸೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.