ADVERTISEMENT
ನಾನು ಬಿಜೆಪಿ ಬಿಡಲ್ಲ ಎಂದು ಮಾಜಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಸ್ಪಷ್ಟಪಡಿಸಿದ್ದಾರೆ.
ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂಬ ಆಧಾರ ರಹಿತ, ಸತ್ಯಕ್ಕೆ ದೂರವಾದ ಸುದ್ದಿಯೊಂದು ಟಿವಿ ಮಾಧ್ಯಮವೊಂದರಲ್ಲಿ ಬಿತ್ತರವಾಗಿರುವದನ್ನ ಗಮನಿಸಿದ್ದೇನೆ.
ಜವಾಬ್ದಾರಿಯುತ ಮಾಧ್ಯಮ ಸಂಸ್ಥೆಗಳು ಯಾವುದೇ ಸುದ್ದಿ ಪ್ರಸಾರ ಮಾಡುವ ಮುನ್ನ ಅದರ ಹಿಂದಿನ ಸತ್ಯಾಂಶ ಅರಿಯಬೇಕು, ಸುದ್ದಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಬೇಕು. ಈ ರೀತಿಯ ಊಹಾಪೋಹದ, ಕಪೋಲಕಲ್ಪಿತ ಸುದ್ದಿಗಳು ಯಾವುದೇ ಮಾಧ್ಯಮಕ್ಕೂ ಶೋಭೆ ತರುವುದಿಲ್ಲ. ಬದಲಾಗಿ ಜನರಲ್ಲಿ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತದೆ.
ನನಗೆ ಸಂಬಂಧಿಸಿದ ಈ ಆಧಾರ ರಹಿತ ಈ ಸುದ್ದಿಯನ್ನು ಕೂಡಲೇ ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲ ವೇದಿಕೆಗಳಿಂದ ಡಿಲೀಟ್ ಮಾಡಿ, ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸುತ್ತೇನೆ.
ಎಂದು ಡಾ ಕೆ ಸುಧಾಕರ್ ಅವರು ಆಗ್ರಹಿಸಿದ್ದಾರೆ.
ಕನ್ನಡದ ಪ್ರಮುಖ ಸುದ್ದಿವಾಹಿನಿ ಟಿವಿ9 ಕನ್ನಡ ಸುಧಾಕರ್ ಅವರು ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ಗೆ ಹೋಗಬಹುದು ಎಂದು ವರದಿ ಪ್ರಸಾರ ಮಾಡಿತ್ತು. ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧದ ಹೀನಾಯ ಸೋಲಿನ ಬಳಿಕ ಬಿಜೆಪಿಯಲ್ಲಿ ಸಕ್ರಿಯರಾಗಿರದ ಸುಧಾಕರ್ ಮತ್ತೆ ಕಾಂಗ್ರೆಸ್ಗೆ ಹೋಗಲು ಆಲೋಚನೆ ಮಾಡುತ್ತಿದ್ದಾರೆ ಎಂದು ವರದಿ ಪ್ರಸಾರ ಮಾಡಿತ್ತು.
ADVERTISEMENT