ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ಯಕ್ರಮ ನಿರ್ವಹಿಸುತ್ತಿದ್ದ ಹಾಸ್ಯ ನಟನ ಕಪಾಳಕ್ಕೆ ಖ್ಯಾತ ನಟ ವಿಲ್ ಸ್ಮಿತ್ ಅವರು ತಮ್ಮ ಹೆಂಡತಿ ಬಗ್ಗೆ ಕಾಮೆಂಟ್ ಮಾಡಿದ ಕಾರಣಕ್ಕೆ ಹೊಡೆದಿದ್ದಾರೆ.
ಭಾನುವಾರ ಗಾಲಾದಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಸ್ಯ ನಟ ಕ್ರಿಸ್ ರಾಕ್ ಖ್ಯಾತ ನಟ ವಿಲ್ ಸ್ಮಿತ್ರ ಹೆಂಡತಿಯ ತಲೆ ಕೂದಲಿನ ಬಗ್ಗೆ ಹಾಸ್ಯ ಮಾಡಿದ್ದರು. ಇದರಿಂದ ಕುಪಿತರಾದ ನಟ ವಿಲ್ ಸ್ಮಿತ್ ಕಾರ್ಯಕ್ರಮದ ವೇದಿಕೆಯ ಮೇಲೆಯೇ ಕ್ರಿಸ್ ರಾಕ್ ರ ಕಪಾಳಮೋಕ್ಷ ಮಾಡಿದ್ದಾರೆ.
ಕಾರ್ಯಕ್ರಮದ ನೇರ ಪ್ರಸಾರದಲ್ಲಿಯೇ ಈ ಘಟನೆ ನಡೆದಿದೆ. ಇದೀಗ ಈ ವೀಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರು ಇದು ನಿಜವಾಗಲೂ ಸಾಮಾನ್ಯವಾಗಿ ನಡೆದಿದ್ದೇ ಅಥವಾ ಸ್ಕ್ರಿಪ್ಟೆಡ್ ಕಾರ್ಯಕ್ರಮವೇ ಎಂದು ಪ್ರಶ್ನಿಸುತ್ತಿದ್ದಾರೆ.
#badboys3 #gijane2 #willsmith #chrisrock #oscars #besttvever
Can't believe what I just saw live on screen pic.twitter.com/YiijPRQENt
— Guy Springthorpe (@GuySpringthorpe) March 28, 2022
ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ಟಾ ಸ್ಮಿತ್ ಕೂಡ ನಟಿಯಾಗಿ ಪ್ರಸಿದ್ದಿಯಾಗಿದ್ದಾರೆ. ಇವರು ಅಲೋಪೆಸಿಯಾದಿಂದ ಬಳಲುತ್ತಿದ್ದಾರೆ. ಈ ಅವರು 2018 ರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು.