ಚಳಿಗಾಲದಲ್ಲಿ ಹೆಚ್ಚಾಗಿ ನಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಚರ್ಮವು ಡ್ರೈ ಆಗುವುದರ ಜೊತೆಗೆ ಮುಖದ ಮೇಲೆ ಸೋಂಕುಗಳು ಹೆಚ್ಚು ಕಂಡುಬರುತ್ತದೆ. ಆದಾಗ್ಯೂ, ಮನೆಯಲ್ಲಿ ಸುಲಭ ಸಲಹೆಗಳನ್ನು ಬಳಸುವ ಮೂಲಕ ಅಂತಹ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಚಳಿಗಾಲದಲ್ಲಿ ಅನುಸರಿಸಬೇಕಾದ ಆ ಸಣ್ಣ ಪಾರ್ಟಿ ಸೌಂದರ್ಯ ಸಲಹೆಗಳು ಯಾವುವು ಎಂದು ತಿಳಿದುಕೊಳ್ಳೊಣ
ಚಳಿಗಾಲದ ಸಮಯದಲ್ಲಿ ಪ್ರತಿಯೊಬ್ಬರು ನೀರು ಕುಡಿಯುವುದು ಕಡಿಮೆ ಮಾಡುತ್ತಾರೆ. ಹೀಗಾಗಿ ನಮ್ಮ ದೇಹದಲ್ಲಿ ತೇವಾಂಶ ಕಡಿಮೆಯಾಗದ ಚರ್ಮ ಒಣಗುತ್ತದೆ. ಅದಕ್ಕಾಗಿ ಪ್ರತಿನಿತ್ಯ ದಿನಕ್ಕೆ ಮೂರು ಲೀಟರ್ ನೀರು ಕುಡಿಯಬೇಕು .
ಚರ್ಮವು ಹೈಡ್ರೇಟ್ ಆಗಿರುವುದರಿಂದ ಅನೇಕ ರೀತಿಯ ಚರ್ಮದ ಸಮಸ್ಯೆಗಳನ್ನು ತಪ್ಪಿಸಬಹುದು. ಈ ಅವಧಿಯಲ್ಲಿ ಹೆಚ್ಚು ಬೆವರುವುದಿಲ್ಲ. ಆದ್ದರಿಂದ, ನಮ್ಮ ಬೆವರು ಗ್ರಂಥಿಗಳಲ್ಲಿ ಧೂಳು ಸಂಗ್ರಹವಾಗುತ್ತದೆ. ಮೊಡವೆಗಳು ಉಂಟಾಗುವ ಸಾಧ್ಯತೆಯಿದೆ.
ರಾತ್ರಿ ಮಲಗುವ ಮೊದಲು ನಿಮ್ಮ ಮುಖದ ಮೇಲೆ ಹಬೆಯನ್ನು ಕೊಟ್ಟುಕೊಳ್ಳಬೇಕು. ಬೆಳಿಗ್ಗೆ ಸ್ನಾನ ಮಾಡುವ ಮೊದಲು ಸ್ವಲ್ಪ ತೆಂಗಿನ ಎಣ್ಣೆಯಿಂದ ಮುಖ, ಕಾಲುಗಳು ಮತ್ತು ಕೈಗಳನ್ನು ಮಸಾಜ್ ಮಾಡಿ. ಹಗಲಿನಲ್ಲಿ ಸ್ನಾನದ ನೀರಿಗೆ ಸ್ವಲ್ಪ ಅರಿಶಿನವನ್ನು ಸೇರಿಸುವುದರಿಂದ ದೇಹದ ಮೇಲೆ ಯಾವುದೇ ಸೋಂಕು ಬರದಂತೆ ತಡೆಯಬಹುದು.