ಬೆಂಗಳೂರು ಮೂಲದ ವಿಪ್ರೋ ಕಂಪೆನಿ ಸಿಇಓ ಥಿಯೆರಿ ಡೆಲ್ಲಾಪೋರ್ಟೆಯವರು ಈ ವರ್ಷ ಬರೋಬ್ಬರಿ 79.8 ಕೋ.ರೂ ವಾರ್ಷಿಕ ಸಂಬಳ ಪಡೆದುಕೊಂಡಿದ್ದಾರೆ ಎಂದು ಅಮೇರಿಕಾದ ಸೆಕ್ಯೂರಿಟೀಸ್ ಮತ್ತು ಎಕ್ಸ್ಚೇಂಜ್ ಕಚೇರಿಗೆ ಸಲ್ಲಿಸಿದ ದಾಖಲೆಗಳಲ್ಲಿ ಹೇಳಿಕೊಂಡಿದ್ದಾರೆ.
ಆ ಮೂಲಕ ಥಿಯರಿ ಡೆಲ್ಲಾಪೋರ್ಟೆ ಭಾರತದ ಐಟಿ ವಲಯದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ ಸಿಇಓ ಆಗಿದ್ದಾರೆ. ವಾರ್ಷಿಕವಾಗಿ 79.8 ಕೋ.ರೂ ಸಂಬಳ ಪಡೆದು ಇವರು, ತಿಂಗಳಿಗೆ ಬರೋಬ್ಬರಿ 6.65 ಕೋ.ರೂ ಸಂಬಳ ಪಡೆದಂತಾಗಿದೆ.
2020-21 ರಲ್ಲಿ ಡೆಲ್ಲಾಪೋರ್ಟೆಯವರು 64.3 ಕೋ.ರೂ ಸಂಭಾವನೆ ಪಡೆದುಕೊಂಡಿದ್ದರು. ಜುಲೈ 2020 ರಲ್ಲಿ ಅವರು ಕಂಪನಿಗೆ ಸೇರಿದ್ದರಿಂದ ಪರಿಹಾರ ಹಣ ಒಂಬತ್ತು ತಿಂಗಳದ್ದಾಗಿತ್ತು.
2020-21 ರಲ್ಲಿ ಡೆಲ್ಲಾಪೋರ್ಟೆಯವರು 13.2 ಕೋ.ರೂ ಸಂಭಾವನೆ ಮತ್ತು ಭತ್ಯೆ ಪಡೆದುಕೊಂಡಿದ್ದಾರೆ. ಕಮಿಷನ್ ಮತ್ತು ವೇರಿಯೇಬಲ್ ಪಾವತಿ 19.3 ಕೋ.ರೂ, ಇತರೆ ಸೌಲಭ್ಯಗಳಿಗಾಗಿ 31.8 ಕೋ.ರೂ ಹಣವನ್ನು ಕಂಪೆನಿಯಿಂದ ಪಡೆದುಕೊಂಡಿದ್ದರು.
ಕಳೆದ ವರ್ಷದ 11.8 ಕೋ.ರೂ ಪರಿಹಾರ ಪ್ಯಾಕೇಜ್ನಿಂದ 13.8 ಕೋ.ರೂಗಳಿಗೆ ಪರಿಹಾರ ಪ್ಯಾಕೇಜ್ ಹೆಚ್ಚಳವಾಗಿದೆ. ಒಂದು ಬಾರಿಯ ಪರಿಹಾರ ಪ್ಯಾಕೇಜ್ ಅನ್ನು ಜುಲೈ 2020 ರಲ್ಲಿ ಅದರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರು ಅನುಮೋದಿಸಿದ ನಂತರ ನೀಡಲಾಗಿದೆ.
2022 ರ ಆರ್ಥಕ ವರ್ಷದಲ್ಲಿ ಇನ್ಫೋಸಿಸ್ ಸಿಇಈ ಸಲೀಲ್ ಪರೇಖ್ ಅವರು 71ಕೋ.ರೂಗಳ ಸಂಬಳ ಪಡೆದಿದ್ದರು. ಟಿಸಿಎಸ್ ಸಿಇಓ ರಾಜೇಶ್ ಗೋಪಿನಾಥನ್ ಅವರು 25.77 ಕೋ.ರೂ ಸಂಬಳ ಪಡೆದುಕೊಂಡಿದ್ದಾರೆ.