700ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆಗಳನ್ನು ನಡೆಸಿರುವ ಮಹಿಳಾ ಶವಪರೀಕ್ಷೆ ಸಹಾಯಕಿಯೊಬ್ಬರನ್ನು ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ರಾಮಮಂದಿರ ಟ್ರಸ್ಟ್ ಆಹ್ವಾನಿಸಿದೆ.
ಛತ್ತಿಸ್ಗಢದ ನಿವಾಸಿ ಸಂತೋಷಿ ದುರ್ಗಾ (35) ಅವರು ಸುಮಾರು 18 ವರ್ಷಗಳ ಕಾಲ ನರಹರ್ಪುರ ಪ್ರಾಥಮಿಕ ಆರೋಗ್ಯದಲ್ಲಿ ಜೀವನ್ ದೀಪ್ ಸಮಿತಿಯ ನೈರ್ಮಲ್ಯ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಮಯದಲ್ಲಿ, ಅವರು 700 ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ್ದರು. ಜೊತೆಗೆ ಅವರ ಸೇವೆಗೆ ವಿವಿಧ ಸಂಘಗಳಿಂದ ಮನ್ನಣೆಯನ್ನು ಪಡೆದಿದ್ದರು. ಇದೀಗ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಅವರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ರಾಮಮಂದಿರ ಟ್ರಸ್ಟ್ನಿಂದ ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಂತೋಷಿ ಅವರು, ನನ್ನ ಇಡೀ ಜೀವನದಲ್ಲಿ ನಾನು ಅಯೋಧ್ಯೆಯಿಂದ ಕರೆಸಿಕೊಳ್ಳುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಆದರೆ ಆಮಂತ್ರಣ ಪತ್ರವನ್ನು ಕಳುಹಿಸುವ ಮೂಲಕ ಶ್ರೀರಾಮನು ನನ್ನನ್ನು ಕರೆದಿದ್ದಾನೆ ಎಂದು ಸಂತೋಷ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ನಾಗರಿಕ ಪ್ರಶಸ್ತಿ ಪುರಸ್ಕೃತರು, ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಮತ್ತು ರಾಮಮಂದಿರ ಚಳವಳಿಯ ಸಂದರ್ಭದಲ್ಲಿ ಮಡಿದ ಕರಸೇವಕರ ಕುಟುಂಬ ಸದಸ್ಯರನ್ನು ಆಹ್ವಾನಿಸಲಾಗಿದೆ.