ಕ್ರಿಸ್ಗೆ ಬಂದ ಬಳಿಕ ಎರಡು ನಿಮಿಷದೊಳಗೆ ಮೊದಲ ಬಾಲ್ ಎದುರಿಸಿದ ಕಾರಣಕ್ಕೆ ಐಸಿಸಿ ನಿಯಮಗಳ ಪ್ರಕಾರ ಶ್ರೀಲಂಕಾ ಬ್ಯಾಟ್ಸ್ಮನ್ ಅಂಜೆಲೋ ಮಾಥ್ಯೂಸ್ ಟೈಮ್ಡ್ ಔಟ್ ನಿಯಮದಡಿ ಔಟಾಗಿದ್ದಾರೆ.
ಒಂದೂ ಎಸೆತವನ್ನೂ ಎದುರಿಸದೇ ಟೈಮ್ಸ್ಔಟ್ ನಿಯಮಗಳ ಪ್ರಕಾರ ಔಟ್ ಆದ ಮೊದಲ ಬ್ಯಾಟ್ಸ್ಮನ್ ಎಂಬ ಕಳಂಕ ಅಂಜೆಲೋ ಮ್ಯಾಥ್ಯೂಸ್ ಅವರ ಪಾಲಾಗಿದೆ.
ಇದೇ ರೀತಿಯಲ್ಲಿ ಐಸಿಸಿ ಕ್ರಿಕೆಟ್ ನಿಯಮಗಳ ಅಡಿಯಲ್ಲಿ ಮೊದಲ ಬಾರಿಗೆ ಔಟ್ ಆದ ಆಟಗಾರರ ಪಟ್ಟಿ ಈ ರೀತಿ ಇದೆ.
1947ರಲ್ಲಿ ಭಾರತದ ಆಟಗಾರ ವಿನೋದ್ ಮಂಕಡ್ ಅವರು ನಾನ್ಸ್ಟ್ರೈಕರ್ಸ್ ಎಂಡ್ನಲ್ಲಿ ಔಟಾಗುವ ಮೂಲಕ ಈ ರೀತಿ ಔಟಾದ ಮೊದಲ ಆಟಗಾರ ಎನಿಸಿಕೊಂಡರು.
ಫೀಲ್ಡ್ನಲ್ಲಿ ಕಿರಿಕ್ ತೆಗೆದರು ಎಂಬ ಕಾರಣಕ್ಕೆ 1987ರಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರ ರಮಿಜ್ ರಾಜಾ ಅವರನ್ನು ಔಟ್ ಮಾಡಲಾಯಿತು. ಈ ಕಾರಣಕ್ಕೆ ಔಟಾದ ಮೊದಲ ಆಟಗಾರ ರಮಿಜ್ ರಾಜಾ.
2008ರಲ್ಲಿ ಡಿಆರ್ಎಸ್ ನಿಯಮ ಜಾರಿ ಆದ ಬಳಿಕ ಆ ನಿಯಮದಡಿಯಲ್ಲಿ ವಿಕೆಟ್ ಒಪ್ಪಿಸಿದ ಮೊದಲ ಆಟಗಾರ ನಮ್ಮವರೇ ಆದ ವಿರೇಂದ್ರ ಸೆಹ್ವಾಗ್.
ADVERTISEMENT
ADVERTISEMENT