ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಕ್ಕೆ ದಿನಾಂಕ ಘೋಷಣೆ ಆಗಿದೆ. ಅಕ್ಟೋಬರ್ 5ರಂದು ಉದ್ಘಾಟನಾ ಪಂದ್ಯ ನಡೆಯಲಿದ್ದು, ನವೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ.
ಭಾರತದ 10 ನಗರಿಗಳಲ್ಲಿ 46 ದಿನ ವಿಶ್ವಕಪ್ ಕ್ರಿಕೆಟ್ ಕದನ ನಡೆಯಲಿದೆ. ವಿಶ್ವಕಪ್ನಲ್ಲಿ ಒಟ್ಟು 10 ರಾಷ್ಟ್ರಗಳು ಭಾಗವಹಿಸುತ್ತಿವೆ. ಇವುಗಳಲ್ಲಿ 2 ತಂಡಗಳನ್ನು ಜುಲೈ 9ರಂದು ಜಿಂಬಾಬ್ವೆಯಲ್ಲಿ ಕೊನೆಯಾಗುವ ಕ್ವಾಲಿಫೈಯರ್ ಪಂದ್ಯದ ಬಳಿಕ ಆಯ್ಕೆ ಮಾಡಲಾಗುತ್ತದೆ.
ಅಕ್ಟೋಬರ್ 5ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2019ರ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಪಂದ್ಯ ನಡೆಯಲಿದೆ.
ವಿಶ್ವಕಪ್ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧದ ಚೆನ್ನೈನಲ್ಲಿ ಅಕ್ಟೋಬರ್ 8ರಂದು ಆಡಲಿದೆ.
ಭಾರತ ಆಡಲಿರುವ ಪಂದ್ಯಗಳು:
ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ
ಅಕ್ಟೋಬರ್ 11ರಂದು ಅಫ್ಘಾನಿಸ್ತಾನ ವಿರುದ್ಧ ದೆಹಲಿಯಲ್ಲಿ
ಅಕ್ಟೋಬರ್ 15ರಂದು ಪಾಕಿಸ್ತಾನ ವಿರುದ್ಧ ಅಹಮದಾಬಾದ್ನಲ್ಲಿ
ಅಕ್ಟೋಬರ್ 19ರಂದು ಬಾಂಗ್ಲಾದೇಶ ವಿರುದ್ಧ ಪುಣೆಯಲ್ಲಿ
ಅಕ್ಟೋಬರ್ 22ರಂದು ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ
ಅಕ್ಟೋಬರ್ 29ರಂದು ಇಂಗ್ಲೆಂಡ್ ವಿರುದ್ಧ ಲಕ್ನೋದಲ್ಲಿ
ನವೆಂಬರ್ 2ರಂದು ಕ್ವಾಲಿಫೈರ್ 2 ತಂಡದ ವಿರುದ್ಧ ಮುಂಬೈನಲ್ಲಿ
ನವೆಂಬರ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತ್ತಾದಲ್ಲಿ
ನವೆಂಬರ್ 11ರಂದು ಕ್ವಾಲಿಫೈಯರ್ 1 ತಂಡದ ವಿರುದ್ಧ ಬೆಂಗಳೂರಲ್ಲಿ
ಸೆಮಿಫೈನಲ್ ಪಂದ್ಯಗಳು:
ನವೆಂಬರ್ 15ರಂದು ಮೊದಲ ಸೆಮಿಫೈನಲ್ ಪಂದ್ಯ ಮುಂಬೈನಲ್ಲಿ ಮತ್ತು ನವೆಂಬರ್ 16ರಂದು ಎರಡನೇ ಸೆಮಿಫೈನಲ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ.
ADVERTISEMENT
ADVERTISEMENT