ಭಾರತೀಯ ರೆಸ್ಲಿಂಗ್ ಫೆಡರೇಷನ್ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಕೆಲದಿನಗಳಿಂದ ಹೋರಾಡುತ್ತಿರುವ ರೆಸ್ಲರ್ ವಿನೇಶ್ ಫೋಗಟ್ ಒಂದು ಕವಿತೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿ ತನಗೆ ನ್ಯಾಯ ಬೇಕೆಂದು ಆಗ್ರಹಿಸಿದ್ದಾರೆ..
ಹಿಂದಿ ಕವಿ ಪುಷ್ಯಮಿತ್ರ ಉಪಾಧ್ಯಾಯ್ ಬರೆದ ಆ ಕವಿತೆಯನ್ನು ತಮ್ಮ ಇನ್ಸ್ಟಾ ಗ್ರಾಮ್ನಲ್ಲಿ ವಿನೇಶ್ ಫೋಗಟ್ ಹಂಚಿಕೊಂಡಿದ್ದಾರೆ.
ಈ ಮೂಲಕ ಜಡ್ಡುಗಟ್ಟಿದ ವ್ಯವಸ್ಥೆಯ ಕುರಿತಾಗಿ ತಮ್ಮ ಮನದ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಆ ಕವಿತೆ ಇಲ್ಲಿದೆ..
ದ್ರೌಪದಿ ಆಯುಧ ತೆಗೆದುಕೋ..
ಶ್ರೀಕೃಷ್ಣ ಇನ್ನು ಬರುವುದಿಲ್ಲ..!
ಮೆಹಂದಿ ಹಚ್ಚಿದ ಕೈಯಲ್ಲಿ ಕತ್ತಿ ಹಿಡಿ
ನಿನ್ನ ಸೀರೆಯನ್ನು ನೀನೇ ಕಾಪಾಡಿಕೋ..
ಶಕುನಿ ಜೂಜಿನಲ್ಲಿ ಮುಳುಗಿದ್ದಾನೆ
ಮೆದುಳುಗಳೆಲ್ಲಾ ಮಾರಾಟವಾಗಿವೆ..ದ್ರೌಪದಿ ಆಯುಧ ತೆಗೆದುಕೋ..
ಶ್ರೀಕೃಷ್ಣ ಇನ್ನು ಬರುವುದಿಲ್ಲ
ಎಷ್ಟು ಸಮಯ ಎಂದು ಕಾಯುತ್ತೀಯಾ?
ಮಾರಾಟವಾದ ಮಾಧ್ಯಮವನ್ನು ಏನೆಂದು ರಕ್ಷಣೆ ಕೇಳುತ್ತೀಯಾ
ದುಶ್ಯಾಸನ ಸಭೆಯಲ್ಲಿ ನಾಚಿಕೆ ಇಲ್ಲದವರು…
ನಿನ್ನ ಮಾನವನ್ನು ಹೇಗೆ ಕಾಪಾಡುತ್ತಾರೆ..?ದ್ರೌಪದಿ ಆಯುಧ ತೆಗೆದುಕೋ..
ಶ್ರೀಕೃಷ್ಣ ಇನ್ನು ಬರುವುದಿಲ್ಲ
ನಿನ್ನೆಯವರೆಗೂ ರಾಜ ಕುರುಡ ಮಾತ್ರ
ಈಗ ಕಿವುಡ ಮತ್ತು ಮೂಗ ಕೂಡ…
ಜನರ ಬಾಯಿಗೆ ಹಾಕಿದ್ದಾರೆ ಹೊಲಿಗೆ
ಜನರ ಕಿವಿಗಳಿಗೆ ಕಟ್ಟು ಕಟ್ಟಿದ್ದಾರೆ..
ಈ ಕಣ್ಣೀರು ನನ್ನದೇ ಎಂದು ನೀನೇ ಹೇಳಿಕೋ..
ಇಲ್ಲಿ ಯಾರಿಗೆ ಏನು ಹೇಳಲು ಸಾಧ್ಯ..?ದ್ರೌಪದಿ ಆಯುಧ ತೆಗೆದುಕೋ..
ಶ್ರೀಕೃಷ್ಣ ಇನ್ನು ಬರುವುದಿಲ್ಲ