ರಾಕಿಬಾಯ್ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಇಂದು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿದ್ದಾರೆ.
ರಾಕಿಬಾಯ್ ಯಶ್ ಅವರ ಕೆಜಿಎಫ್-2 ಚಿತ್ರ ವಿಶ್ವಾದ್ಯಂತ ಅತ್ಯುತ್ತಮ ಪ್ರದರ್ಶನ ಕಂಡು ಮುನ್ನುಗ್ಗುತ್ತಿದೆ. ಈಗಾಗಲೇ ಹಲವು ದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಚಿತ್ರ 1000 ಕೋ.ರೂ ಗಳಿಕೆಯನ್ನು ಕಂಡಿದೆ. ಆ ಮೂಲಕ ಈ ಪರಿಪ್ರಮಾಣದಲ್ಲಿ ಗಳಿಕೆ ಕಂಡ ಕನ್ನಡದ ಮೊದಲ ಚಿತ್ರ ಹಾಗೂ ಭಾರತದ 4 ನೇ ಚಿತ್ರ ಎಂಬ ಹೆಗ್ಗಳಿಕೆಯನ್ನು ಕೆಜಿಎಫ್-2 ಪಡೆದುಕೊಂಡಿದೆ.
ಈ ಚಿತ್ರದ ಯಶಸ್ಸಿನ ನಂತರ ಚಿತ್ರತಂಡ ಟ್ರಪ್ನಲ್ಲಿದೆ. ಅದರಂತೆ, ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಗೋವಾದ ಟ್ರಿಪ್ನಲ್ಲಿದ್ದಾರೆ.
It was a pleasure to meet the KGF superstar, @TheNameIsYash along with his wife Radhika and team at Panaji. pic.twitter.com/oyuR0NRwub
— Dr. Pramod Sawant (Modi Ka Parivar) (@DrPramodPSawant) May 4, 2022
ಗೋವಾದ ಪಣಜಿಯಲ್ಲಿರುವ ಸ್ಟಾರ್ ದಂಪತಿ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಫೋಟೋ ಸಮೇತ ಹಂಚಿಕೊಂಡಿರುವ ಗೋವಾ ಸಿಎಂ, ಕೆಜಿಎಫ್ ಸೂಪರ್ ಸ್ಟಾರ್ ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಅವರನ್ನು ಭೇಟಿಯಾಗಿ ಸಂತೊಷವಾಯಿತು ಎಂದು ಬರೆದುಕೊಂಡಿದ್ದಾರೆ.