‘ಅಂತರರಾಷ್ಟ್ರೀಯ ಯೋಗ ದಿನ’ದ ಪ್ರಯುಕ್ತ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಯೋಗ ಪ್ರಚಾರಕ್ಕಲ್ಲ, ಆರೋಗ್ಯಕ್ಕಾಗಿ ಎಂದು ಹೇಳುವ ಮೂಲಕ ರಾಜ್ಯಕ್ಕೆ ಯೋಗ ಮಾಡಲು ಬಂದ ಪ್ರಧಾನಿಯ ಹಾಗೂ ಬಿಜೆಪಿಯ ಬಗ್ಗೆ ಪರೋಕ್ಷವಾಗಿ ಕುಟುಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಶ್ರದ್ಧೆ, ಬದ್ಧತೆ ಮತ್ತು ಸಹೃದಯತೆಯಿಂದ ಬೌದ್ಧಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗ ಮಾಡೋಣ. ಯೋಗ ಪ್ರಚಾರಕ್ಕಲ್ಲ, ಆರೋಗ್ಯಕ್ಕಾಗಿ. ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು ಎಂದು ಹೇಳಿದ್ದಾರೆ.
ಜೂನ್ 21 ಅನ್ನು ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನವೆಂದು ಆಚರಿಸಲಾಗುತ್ತಿದೆ. ಈ ವರ್ಷ 8ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ.