7 ವಿಧಾನಸಭಾ ಕ್ಷೇತ್ರಗಳು ಮತ್ತು ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯ ಮೊದಲ ಫಲಿತಾಂಶ ಪ್ರಕಟ ಆಗಿದೆ.
ಆಂಧ್ರಪ್ರದೇಶದ ಆತ್ಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತರೂಢ ವೈ ಎಸ್ ಆರ್ ಕಾಂಗ್ರೆಸ್ ಪ್ರಚಂಡ ಜಯ ಸಾಧಿಸಿದೆ. ಬಿಜೆಪಿ ಠೇವಣಿ ಕಳೆದುಕೊಂಡಿದೆ.
ವೈ ಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿ ಮೇಕಪೇಟಿ ವಿಕ್ರಮ್ ರೆಡ್ಡಿ 1,02,074 ಮತ ಪಡೆದಿದ್ದು, ಒಟ್ಟು 82,782 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಇವರ ವೈ ಎಸ್ ಆರ್ ಕಾಂಗ್ರೆಸ್ ಶಾಸಕರಾಗಿದ್ದ ಇವರ ತಂದೆಯ ನಿಧನದಿಂದ ಉಪ ಚುನಾವಣೆ ನಡೆದಿತ್ತು.
ಎರಡನೇ ಸ್ಥಾನದಲ್ಲಿರುವ ಬಿಜೆಪಿ ಅಭ್ಯರ್ಥಿ ಭರತ್ ಕುಮಾರ್ ಗುಂಡ್ಲಪಳ್ಳಿ ಅವರು 19,332 ಮತಗಳನ್ನು ಪಡೆದು ಹೀನಾಯವಾಗಿ ಸೋಲು ಅನುಭವಿಸಿದ್ದಾರೆ.
ಈ ಉಪ ಚುನಾವಣೆಯಲ್ಲಿ ಆಂಧ್ರದ ಪ್ರಮುಖ ಪಕ್ಷ ಚಂದ್ರಬಾಬು ನಾಯ್ಡು ಅವರ ಟಿಡಿಪಿ, ಕಾಂಗ್ರೆಸ್ ಸ್ಪರ್ಧೆ ಮಾಡಿರಲಿಲ್ಲ. ಬಹುಜನಸಮಾಜದ ಪಕ್ಷದ ನಂದು ಓಬಳೇಶು ಅವರು 4,897 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.