ಗುಜರಾತ್ ಮೂಲದ ಉದ್ಯಮಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಆಪ್ತ ಎಂದೇ ಭಾವಿಸಲಾಗಿರುವ ಗೌತಮ್ ಅದಾನಿಗೆ (Gautam Adani) ಕೇಂದ್ರ ಸರ್ಕಾರ ಝಡ್ (Z) ಕೆಟಗರಿ ಭದ್ರತೆಯನ್ನು ನೀಡಿದೆ.
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಗುಪ್ತಚರ ಇಲಾಖೆಯ (IB) ಮಾಹಿತಿಯನ್ನು ಆಧರಿಸಿ ಝಡ್ ಭದ್ರತೆಯನ್ನು ನೀಡಲಾಗಿದೆ.
ಝಡ್ ಭದ್ರತೆಯಡಿ ಗೌತಮ್ ಅದಾನಿ ಅವರಿಗೆ 30 ಸೇನಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತದೆ.
ಝಡ್ ಭದ್ರತೆಯ ವೆಚ್ಚವನ್ನು ಗೌತಮ್ ಅದಾನಿಯವರೇ ಭರಿಸಲಿದ್ದಾರೆ.
ಗುಪ್ತಚರ ವರದಿ ಆಧರಿಸಿ ಅದಾನಿ ಅವರಿಗೆ ಇರುವ ಬೆದರಿಕೆಯ ತೀವ್ರತೆಯನ್ನು ಆಧರಿಸಿ ಝಡ್ ಭದ್ರತೆ ನೀಡಲಾಗಿದೆ.
ಉದ್ಯಮಿಗಳಾದ ಮುಖೇಶ್ ಅಂಬಾನಿ (Mukesh Ambani) ಮತ್ತು ಪತ್ನಿ ನೀತು ಅಂಬಾನಿಯವರೂ (Nitu Ambani) ಈಗಾಗಲೇ ಝಡ್ ಭದ್ರತೆ ಹೊಂದಿದ್ದಾರೆ.
ADVERTISEMENT
ADVERTISEMENT