ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿರುವ ಚಂದ್ರು ಕೊಲೆ ಪ್ರಕರಣದಲ್ಲಿ ಮುಸ್ಲಿಂ ಹುಡುಗರದ್ದೂ ತಪ್ಪೂ ಇದೆ ಎಂದಿರುವ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ `ಚಿಕ್ಕ ವಯಸ್ಸಿನಲ್ಲಿ ಚಾಕು ಇಟ್ಕೊಂಡ್ರೆ ಹೇಗೆ’ ಎಂದು ಹೇಳಿದ್ದಾರೆ.
`ಕೊಲೆ ಮಾಡ್ಬೇಕು ಅಂತ ಚುಚ್ಚಿಲ್ಲ. ಶಿಕ್ಷೆ ಆಗ್ಬೇಕು, ಅರೆಸ್ಟ್ ಮಾಡಿದ್ದಾರೆ, ಶಿಕ್ಷೆ ಆಗ್ಲೇಬೇಕು. ಅವ್ನು ಏನ್ ಮಾಡವ್ನೇ ತೊಡೆಗೆ ಚಾಕು ಚುಚ್ತಾವ್ನೇ. ಯಾವುದೋ ನರ ಕಟ್ ಆಗ್ಬಿಟ್ಟಿದೆ ಅವ್ನುಂದು (ಚಂದ್ರು). ಕಂಟಿನ್ಯೂ ಬ್ಲಡ್ ಹೋಗಿ, ಇಲ್ಲಂದ್ರೆ ಸಾಯ್ತಾ ಇರಲಿಲ್ಲ ಅವ್ನು. ನರ ಕಟ್ ಆಗಿ ಬ್ಲಡ್ ನಿಂತಿಲ್ಲ. ಹಾಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರ್ಕೊಂಡು ಹೋಗಿದ್ದಾರೆ, ಸತ್ತಿದ್ದಾರೆ. ನಾನು ಪೋಸ್ಟ್ ಮಾರ್ಟಂ ಮಾಡಿಸಿ ಅವರ ಅಜ್ಜಿಗೆ ಸಮಾಧಾನ ಮಾಡಿ, ಅವರ ಮನೆಯವರಿಗೆ ಸಮಾಧಾನ ಮಾಡಿ ಅವರು ಯಾವ ಥರ ಕ್ರಿಶ್ಚಿಯನ್ ಸಮುದಾಯದ ಪ್ರಕಾರ ಕ್ರಿಮೇಷನ್ ಮಾಡ್ಬೇಕು ಅಂತ ಎಲ್ಲ ನಾವು ಮಾಡಿದ್ವಿ.
ಅವ್ನು (ಚಂದ್ರು) ಮಣ್ಣಾದ ಎರಡು ದಿನ ಆದ್ಮೇಲೆ ಬಿಜೆಪಿಯವರು ಬಂದು ರಾಜಕೀಯ ಮಾಡ್ತಾರೆ ಅಂದ್ರೆ ಸರೀನಾ ಅಂತ. ಸತ್ತ ದಿನ ಬಂದಿಲ್ಲ, ಎರಡು ದಿನ ಆದ್ಮೇಲೆ ಬಂದಿದ್ದಾರೆ. ಸಿ ಟಿ ರವಿ ಬರ್ತಾರೆ, ಪಿ ಸಿ ಮೋಹನ್ ಬರ್ತಾರೆ, ಶವ ಇದ್ದಾಗ ಯಾರೂ ಬಂದಿಲ್ಲ. ಬೇರೆ ದಿನ ಬಂದು ರಾಜಕೀಯ ಮಾಡಿದ್ದಾರೆ. ಪೊಲೀಸ್ ಆಯುಕ್ತರೇ ಸುಳ್ಳು ಹೇಳ್ತಿದ್ದಾರೆ ಅಂತ ಬಿಜೆಪಿಯವರು ಹೇಳ್ತಿದ್ದಾರೆ. ಸರ್ಕಾರ ಯಾರದ್ದು ಇರೋದು ಸ್ವಾಮಿ, ನಿಮ್ಮ ಸರ್ಕಾರ ಇರೋದು, ಕಮೀಷನರ್ ಇರೋದು ಯಾರು ಅವರೇ, ಈಗ ತನಿಖೆ ಮಾಡೋದು ಯಾರು ಪೊಲೀಸರು ತಾನೇ.. ನಾವು ತನಿಖೆ ಮಾಡಕ್ಕಾಗುತ್ತಾ..? ಆಕ್ಸಿಡೆಂಟ್ನಿAದಾಗಿ ಈ ಘಟನೆ ಆಗಿದೆ ಎಂದು ಕಮೀಷನರ್ ಒಪ್ಪಿಕೊಂಡಿದ್ದಾರೆ. ಇವರಿಗೆ (ಬಿಜೆಪಿಯವರಿಗೆ) ದೇವರು ಒಳ್ಳೆದು ಮಾಡ್ತಾನಾ..? ಏನು ಉದ್ದೇಶ ಅವರದ್ದು..?’
ಎಂದು ಚಾಮರಾಜಪೇಟೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ