ಬೆಂಗಳೂರಿನಲ್ಲಿ ನಡೆಯಲಿರುವ 13 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ಮಕ್ಕಳ ಚಿತ್ರವೊಂದು ಆಯ್ಕೆಯಾಗಿದೆ.
ಕಿಶೋರ್ ಮೂಡಬಿದ್ರೆ ನಿರ್ದೇಶನದ ‘ಕೇಕ್’ ಎನ್ನುವ ಕನ್ನಡ ಚಿತ್ರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಮಕ್ಕಳ ವಿಭಾಗದಲ್ಲಿ ಪ್ರದರ್ಶನವಾಗಲು ಆಯ್ಕೆಯಾಗಿದೆ.
ಇದೇ ಮಾರ್ಚ್ 3 ರಿಂದ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದ್ದು, ಮಾರ್ಚ್ 10 ಕ್ಕೆ ಮುಕ್ತಾಯಗೊಳ್ಳಲಿದೆ.
View this post on Instagram
ಕೇಕ್ ಮಕ್ಕಳ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಬಗ್ಗೆ ನಿರ್ದೇಶಕ ಕಿಶೋರ್ ಮೂಡಬಿದ್ರೆ ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಇನ್ನು, ಈ ಚಿತ್ರವನ್ನು ಪರೀಕ್ಷಿತ್ ಕೆವಿ ಅವರು ನಿರ್ಮಾಣ ಮಾಡಿದ್ದಾರೆ.