ಬೆಂಗಳೂರು: ಚಿನ್ನದ ಬೆಲೆ ಇಂದು ದಿಡೀರನೆ ಭಾರೀ ಇಳಿಕೆಯಾಗಿದೆ. ನಿರಂತರವಾಗಿ ಗಗನಮುಖಿಯಾಗ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಇಳಿಕೆ ಕಂಡುಬಂದಿದ್ದು ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.
ಡಿಸೆಂಬರ್ 01 ಶುಕ್ರವಾರ, ಮಾರುಕಟ್ಟೆಯಲ್ಲಿ ಚಿನ್ನದ ದರ ದೇಶದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 60 ರೂಪಾಯಿ ಇಳಿಕೆಯಾಗಿ 5,750 ರೂಪಾಯಿಯಾದ್ರೆ, ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 65 ರೂಪಾಯಿ ಇಳಿಕೆಯಾಗಿ 6,273 ರೂಪಾಯಿಗೆ ಕುಸಿದಿದೆ.
ಇನ್ನು ಈ ಹಳದಿ ಲೋಹದ ಈಗಿನ ಇಳಿಕೆ ಕೇವಲ ತಾತ್ಕಾಲಿಕವಾಗಿದ್ದು, ಯಾವುದೇ ಕ್ಷಣದಲ್ಲಾದ್ರೂ ಏರಿಕೆಯಾಗೋದ್ರಲ್ಲಿ ಆಶ್ಚರ್ಯವಿಲ್ಲ.