ಈ ಬಾರಿಯ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಸಿಕ್ಕಿದೆ. ಉತ್ತರ ಪ್ರದೇಶ ಸಮಾಜವಾದಿ ಪಕ್ಷ ಗೆಲ್ಲುವ ರಾಜ್ಯವಾಗಿತ್ತು. ಆದರೂ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ 3 ಪಟ್ಟು ಹೆಚ್ಚು ಗೆದ್ದಿದೆ. 42 ರಿಂದ 125 ಸೀಟುಗಳಿಗೆ ಹೆಚ್ಚಾಗಿದೆ. ಬಿಜೆಪಿಯ ಗೆಲುವಿಗೆ ಮಾಯಾವತಿ ಮತ್ತು ಓವೈಸಿಯವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಿಸಿದ್ದಾರೆ. ಬಿಜೆಪಿ ಗೆಲುವಿಗೆ ಕಾರಣವಾದ ಮಾಯಾವತಿ ಮತ್ತು ಒವೈಸಿಯವರಿಗೆ ಪದ್ಮ ವಿಭೂಷಣ ಮತ್ತು ಭಾರತ ರತ್ನ ಪ್ರಶಸ್ತಿ ನೀಡಬೇಕು ಲೇವಡಿ ಮಾಡಿದ್ದಾರೆ. ಬಿಜೆಪಿ 4 ರಾಜ್ಯಗಳಲ್ಲಿ ಗೆದ್ದಿದೆ, ಇದರಿಂದ ನಮಗೆ ಯಾವುದೇ ಆಘಾತವಾಗುವುದಿಲ್ಲ, ನಿಮ್ಮ ಸಂತೋಷದಲ್ಲಿ ನಾವು ಭಾಗಿಯಾಗಿದ್ದೇವೆ ಎಂದರು.
ಉತ್ತರಾಖಂಡ ಸಿಎಂ ಏಕೆ ಸೋತರು, ಇಬ್ಬರು ಉಪ ಮುಖ್ಯಮಂತ್ರಿಗಳು ಗೋವಾದಲ್ಲಿ ಈ ಚುನಾವಣೆಯಲ್ಲಿ ಸೋತಿದ್ದಾರೆ. ಹೆಚ್ಚು ಕಳವಳಕಾರಿ ವಿಷಯ ಪಂಜಾಬ್ ನದ್ದು. ರಾಷ್ಟ್ರೀಯ ಪಕ್ಷ ಬಿಜೆಪಿಯನ್ನು ಪಂಜಾಬ್ ಜನತೆ ತಿರಸ್ಕರಿಸಿದ್ದಾರಲ್ಲವೇ ಎಂದು ಕೇಳಿದರು.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವರು ಪ್ರತಿಯೊಬ್ಬರೂ ಸತತವಾಗಿ ಪಂಜಾಬ್ ನಲ್ಲಿ ಪ್ರಚಾರ ನಡೆಸಿದ್ದರು. ಹಾಗಿದ್ದರೂ ಬಿಜೆಪಿ ಏಕೆ ಪಂಜಾಬ್ ನಲ್ಲಿ ಸೋತಿದೆ, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮೊದಲೇ ಬಿಜೆಪಿ ಪರವಾಗಿತ್ತು. ಆದರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಶಿವಸೇನೆಗೆ ಹೋಲಿಸಿದರೆ ಪಂಜಾಬ್ ನಲ್ಲಿ ಬಿಜೆಪಿ ಸೋತಿದೆ ಎಂದು ಸಂಜಯ್ ರಾವತ್ ಹೇಳಿದರು.