ಅಂದುಕೊಂಡಂತೆಯೇ ಆಗಿದೆ. ನ್ಯಾಟೊ ವೇಗಕ್ಕೆ ತಡೆ ಹಾಕುವ ಸಲುವಾಗಿ ಉಕ್ರೇನ್ ಮೇಲೆ ರಷ್ಯಾ ಪ್ರಕಟಿಸಿದೆ. ಉಕ್ರೇನ್ ರಾಜಧಾನಿ ಕೀವ್ ಸೇರಿ ಪ್ರಮುಖ ನಗರಗಳ ಮೇಲೆ ಬಾಂಬ್ ಸುರಿಮಳೆಗೈಯುತ್ತಿದೆ.
ಈ ಯುದ್ಧದ ಪರಿಣಾಮ ಷೇರುಪೇಟೆ ಮೇಲಾಗಿದೆ. ಹೂಡಿಕೇದಾರರು ತತ್ತರಿಸಿಹೋಗಿದ್ದಾರೆ. ಯಾವುದಕ್ಕೂ ಇರಲಿ ಎಂದು ಹೂಡಿಕೆ ವಾಪಾಸ್ ಪಡೆಯುತ್ತಿದ್ದಾರೆ. ಮುಂಬೈ ಷೇರುಪೇಟೆ, NSE ಭಾರಿ ನಷ್ಟ ಅನುಭವಿಸುತ್ತಿವೆ.
ಬೆಳಗ್ಗೆ 9.40ಕ್ಕೆ 1364 ಅಂಶ ನಷ್ಟ ಹೋಗಿ 55,867 ಪಾಯಿಂಟ್ ಗೆ ಕುಸಿದಿದೆ. ಮಾರ್ಕೆಟ್ ಆರಂಭವಾದ 40ನಿಮಿಷದಲ್ಲಿಯೇ ಶೇಕಡಾ 2.38 ಕುಸಿತವಾಯಿತು.
ಮತ್ತೊಂದುಕಡೆ ನಿಫ್ಟಿ 414 ಪಾಯಿಂಟ್ ನಷ್ಟ ಹೋಗಿ 16,648 ಅಂಶಗಳಲ್ಲಿ ಟ್ರೇಡ್ ಆಗುತ್ತಿದೆ. ಈಗಾಗಲೇ ಶೇಕಡಾ 2.43 ರಷ್ಟು ನಷ್ಟ ಹೋಗಿದೆ.
ಅಮೇರಿಕಾ, ನ್ಯಾಟೊ ಪಡೆಗಳು ಎದುರು ದಾಳಿಗೆ ಇಳಿದರೇ, ಇದು ಮಾರ್ಕೆಟ್ ಮೇಲೆ ಮತ್ತಷ್ಟು ಪರಿಣಾಮ ಬೀರುವುದು ಖಚಿತ.