ಅಂಚೆ ಇಲಾಖೆ ತನ್ನ ಗ್ರಾಹಕರ ಸುರಕ್ಷತೆಗಾಗಿ ಅತೀ ಕಡಿಮೆ ಹಣಕ್ಕೆ ದೊಡ್ಡ ಮೊತ್ತದ ಅಪಘಾತ ವಿಮೆಯೊಂದನ್ನು ಪರಿಚಯಿಸಿದೆ. ಅಂಚೆ ಇಲಾಖೆಯ ಅಂಗಸಂಸ್ಥೆ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ಅಪಘಾತ ವಿಮಾ ಪಾಲಿಸಿಯನ್ನು ಕೇವಲ 399ರೂ. ಹಾಗೂ 299ರೂ.ಗೆ ಪರಿಚಯಿಸಿದ್ದು, ಈ ಯೋಜನೆಗೆ ಸೇರ್ಪಡೆಗೊಂಡರೆ 10ಲಕ್ಷ ರೂ. ಅಪಘಾತ ವಿಮೆ ಪಡೆಯ ಬಹುದಾಗಿದೆ.
ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ (ಐಪಿಪಿಬಿ) ಗ್ರಾಹಕರಿಗೆ ಈ ಅಪಘಾತ ವಿಮಾ ಯೋಜನೆಯ ಪ್ರೀಮಿಯಂ ಪ್ಲ್ಯಾನ್ ವಾರ್ಷಿಕ 399ರೂ.ಗೆ ಹಾಗೂ ಮೂಲ ಯೋಜನೆ ವಾರ್ಷಿಕ 299ರೂ.ಗೆ ಲಭ್ಯವಿದೆ. ಅಂಚೆ ಇಲಾಖೆಯ ಈ ವಿಮಾ ಯೋಜನೆಯ ಫಲಾನುಭವಿಗಳು ಆಕಸ್ಮಿಕವಾಗಿ ಅಪಘಾತದಲ್ಲಿ ಸಾವನ್ನಪ್ಪಿದ್ರೆ ಅಥವಾ ಅಂಗವೈಕಲ್ಯಕ್ಕೆ ತುತ್ತಾದ್ರೆ ಅಥವಾ ಸೂಚಿಇತರ ಅವಘಡಗಳಿಗೆ ತುತ್ತಾದ್ರೆ ಅವರಿಗೆ ಆರ್ಥಿಕ ನೆರವು ಸಿಗಲಿದೆ.
ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಈ ಎರಡು ವಿಮಾ ಯೋಜನೆಗಳ ಪ್ರಯೋಜನ ಪಡೆಯಬಹುದಾಗಿದ್ದು, ಈ ವಿಮೆ ಮಾಡಿಸುವ ಗ್ರಾಹಕರ ವಯಸ್ಸು 18-65 ವರ್ಷಗಳ ನಡುವೆ ಇರಬೇಕು.
ಅಂಚೆ ಇಲಾಖೆಯಲ್ಲಿ 100ರೂ. ಪಾವತಿಸಿ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ಖಾತೆ ತೆರೆಯ ಬಹುದಾಗಿದ್ದು, ಐಪಿಪಿಬಿಯಲ್ಲಿ ಖಾತೆ ತೆರೆಯಲು ಆಧಾರ್ ಮತ್ತು ಪ್ಯಾನ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು. ಖಾತೆಯಲ್ಲಿ ಕನಿಷ್ಠ 500 ರೂ. ಹಣ ಡಿಪಾಸಿಟಿ ಮಾಡುವ ಮೂಲಕ 299ರೂ.ಅಥವಾ 399ರೂ. ಪಾವತಿಸಿ ಅಪಘಾತ ವಿಮೆ ಮಾಡಿಸಬಹುದು.