ಕನ್ನಡ ಮನರಂಜನಾ ವಾಹಿನಿ ಜೀ ಕನ್ನಡ ಸದಾ ವಿಭಿನ್ನ, ವಿಶೇಷ, ವಿನೂತನ ಪ್ರಯತ್ನಗಳನ್ನು ಮಾಡ್ತಾ ಬರುತ್ತಿದೆ. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸುತ್ತಿರುವ ಜೀ ಕನ್ನಡ, ಜೀ5 ಒಟಿಟಿ ಮೂಲಕ ಮನೆ ಮಂದಿಯಲ್ಲಾ ಮನೆಯಲ್ಲಿ ಕುಳಿತು ಸಿನಿಮಾಗಳನ್ನು ನೋಡುವ ವೇದಿಕೆ ಕಲ್ಪಿಸಿದೆ. ಕೇವಲ ಸಿನಿಮಾ ಮಾತ್ರವಲ್ಲ ವೆಬ್ ಸೀರೀಸ್ ಗಳನ್ನು ಪ್ರೇಕ್ಷಕರ ಮಡಿಲಿಗೆ ತಂದು ಹಾಕ್ತಾ ಇದೆ. ಇದೇ ಜೀ5 ಒಟಿಟಿ ಈಗ ಬಂಪರ್ ಆಫರ್ ವೊಂದನ್ನು ನೀಡಿದೆ.
ಫ್ರೀಯಾಗಿ ಜೀ5 ನಲ್ಲಿ ಸಿನಿಮಾ ನೋಡಿ!
ಜೀ5 ಒಟಿಟಿ ಫ್ಲಾಟ್ ಫಾರ್ಮ್ ಶುರುವಾಗಿ ಇದೇ 12ನೇ ತಾರೀಖು ನಾಲ್ಕು ವಸಂತಕ್ಕೆ ಕಾಲಿಡ್ತಾ ಇದೆ. ಅಂದ್ರೆ ಜೀ5 4ನೇ ವಾರ್ಷಿಕೋತ್ಸವದ ಸಂಭ್ರಮದ ಖುಷಿಯಲ್ಲಿದೆ. ಈ ಖುಷಿಯ ಕ್ಷಣಗಳನ್ನು ಜೀ5 ಪ್ರೇಕ್ಷಕರೊಟ್ಟಿಗೆ ಹಂಚಿಕೊಳ್ತಾ ಇದೆ. ಜೊತೆಗೆ ಒಂದು ಬೊಂಟಾಟ್ ಅವಕಾಶ ಕೊಡ್ತಿದೆ. ಇದೇ ತಿಂಗಳ 12 ರಿಂದ 14ರವರೆಗೆ ಉಚಿತವಾಗಿ ಜೀ 5ನಲ್ಲಿ ಸಿನಿಮಾ ನೋಡುವ ಅವಕಾಶ ಕಲ್ಪಿಸಿದೆ. ಯಾವುದೇ ಸಬ್ ಸ್ಕ್ರೈಬ್ ಆಗದೇ. ಹಣ ನೀಡದೆ ಸುಮಾರು 72 ಗಂಟೆಗಳ ಕಾಲ ನೀವು ಜೀ5 ಗೆ ಲಾಗಿನ್ ಆಗಿ ಸಿನಿಮಾ ವೀಕ್ಷಣೆ ಮಾಡಬಹುದು. ಇದಕ್ಕಾಗಿ ಜೀ5 ಅಭಿಮಾನವನ್ನೇ ಹಮ್ಮಿಕೊಂಡಿದೆ.
60 ಬ್ಲಾಕ್ ಬಸ್ಟರ್ ಸಿನಿಮಾ ಉಚಿತವಾಗಿ ಕಣ್ತುಂಬಿಕೊಳ್ಳಿ
ಜೀ5 ಒಟಿಟಿಯಲ್ಲಿರುವ ಬರೋಬ್ಬರಿ 60 ಕ್ಕೂ ಹೆಚ್ಚು ವಿವಿಧ ಭಾಷೆ ಸಿನಿಮಾಗಳ ಜೊತೆಗೆ ವೆಬ್ ಸೀರೀಸ್ ನ್ನು ನೀವು ಯಾವುದೇ ಹಣ ಪೇ ಮಾಡದೆ ನೋಡಿ ಎಂಜಾಯ್ ಮಾಡಬಹುದು. ಜೀ5 ಸೂಪರ್ ಹಿಟ್ ಪಟ್ಟಿಯಲ್ಲಿರುವ ಕನ್ನಡ ಸಿನಿಮಾಗಳು ಅಂದ್ರೆ ಕುರುಕ್ಷೇತ್ರ, ಹೀರೋ, ಕಾಳಿದಾಸ ಕನ್ನಡ ಮೇಷ್ಟ್ರು, ದಿ ವಿಲನ್, ಕೆಮಿಸ್ಟ್ರಿ ಆಫ್ ಕರಿಯಪ್ಪ ಈ ಸಿನಿಮಾಗಳ ಜೊತೆಗೆ ವೆಬ್ ಸೀರೀಸ್ ಪಟ್ಟಿಯಲ್ಲಿ ಕೈಲಾಸಪುರ, ಹೈ ಪ್ರಿಸ್ಟ್ ಗಳಿವೆ. ಇದೇ ಫೆ.12 ರಿಂದ 14 ರ ವರೆಗೆ ಜೀ 5 ಒಟಿಟಿ ವೇದಿಕೆಯಲ್ಲಿರುವ ಎಲ್ಲಾ ಚಿತ್ರಗಳು, ವೆಬ್ ಸೀರಿಸ್ ಗಳನ್ನು ಉಚಿತವಾಗಿ ನೋಡಬಹುದಾಗಿದೆ.
https://youtu.be/wNd0tLud9NY