ನನಗೆ ಮತ ಹಾಕದ ಹಿಂದೂಗಳ ನರಗಳಲ್ಲಿ ಮುಸ್ಲಿಮರ ರಕ್ತ ಹರಿಯುತ್ತಿದೆ ಎಂದು ಬಿಜೆಪಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ವಿವಾದಾತ್ಮಕವಾಗಿ ಮಾತನಅಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಹಿಂದೂ ಯುವವಾಹಿನಿಯ ಮುಖ್ಯಸ್ಥರೂ ಆಗಿರುವ ಸಿಂಗ್ ದೊಮಾರಿಯಾ ಜಂಗ್ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. 6ನೇ ಹಂತದ ಚುನಾವಣೆಯಲ್ಲಿ ಇಲ್ಲಿ ಮತದಾನ ನಡೆಯಲಿದೆ.
ವೈರಲ್ ವೀಡಿಯೋದಲ್ಲಿ ಬಿಜೆಪಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ಮಾತನಾಡುತ್ತಾ, ಹೇಳಿ, ಮುಸ್ಲಿಮರು ಯಾರಾದರೂ ನನಗೆ ಮತ ಹಾಕುತ್ತಾರಾ? ಜಾಗೃತರಾಗಿರಿ. ಒಂದು ಪಕ್ಷ ಈ ಹಳ್ಳಿಯ ಹಿಂದೂಗಳು ಬೇರೆಯವರನ್ನು ಬೆಂಬಲಿಸಿದರೆ ಅವರ ನರಗಳಲ್ಲಿ ಮುಸ್ಲಿಮರ ರಕ್ತ ಹರಿಯುತ್ತಿರುತ್ತದೆ. ಅವರು ದೇಶದ್ರೋಹಿಗಳು. ಹತ್ತು ಹಲವು ದೌರ್ಜನ್ಯಗಳ ಬಳಿಕವೂ ಒಬ್ಬ ಹಿಂದೂ ಬೇರೆಯವರಿಗೆ ಬೆಂಬಲ ನೀಡಿದರೆ ಅವರನ್ನು ಸಮಾಜದಲ್ಲಿ ಮುಖ ತೋರಿಸಲು ಬಿಡಬಾರದು ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ.
“Any Hindu who doesn't vote for me has Miyan bl0od in his veins. He's a trait0r. He is bast@rd son of Jaichand. He's a haramkh0r son of his father…I am giving warning this time…trait0rs of Hindu religion will be destroyed.”
BJP MLA Raghvendra Singh asking for Hindu votes. pic.twitter.com/YWOBlXlz81
— Alishan Jafri (@alishan_jafri) February 21, 2022
ಯಾರಾದರೂ ನನ್ನ ಎಚ್ಚರಿಕೆ ಧಿಕ್ಕರಿಸಿದರೆ, ನಾನು ಯಾರೆಂದು ಅವರಿಗೆ ತೋರಿಸುತ್ತೇನೆ. ರಾಘವೇಂದ್ರ ಸಿಂಗ್ ಯಾರೆಂಬುದನ್ನು ಎಲ್ಲರಿಗೂ ಪರಿಚಯ ಮಾಡುತ್ತೇನೆ. ನಾನು ವೈಯಕ್ತಿಕ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ಹಿಂದೂ ಸಮುದಾಯವನ್ನು ಅವಮಾನಿಸುವವರನ್ನು ನಾಶ ಮಾಡುತ್ತೇನೆ ಎಂದು ಗುಡುಗಿದ್ದಾರೆ.
ಇದೀಗ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಶಾಸಕ, ನಾನು ಐದು ದಿನಗಳ ಹಿಂದೆ ಈ ಹೇಳಿಕೆ ನೀಡಿದ್ದೆ. ನನ್ನ ಮಾತನ್ನು ಅಪಾರ್ಥಗೊಳಿಸಲಾಗಿದೆ. ಉದಾಗರಣೆಗೆ ಆ ಮಾತು ಹೇಳಿದ್ದೆ ಎಂದಿದ್ದಾರೆ.
https://youtu.be/nxjPaWF0q8c