ಉಕ್ರೇನ್ ಮೇಲೆ ರಷ್ಯಾ ದಾಳಿ ಜಾಗತಿಕ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. 2014ರ ಬಳಿಕ ಇದೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬ್ಯಾರೆಲ್ ಬೆಲೆ 100ಡಾಲರ್ ದಾಟಿದೆ.
ಇದರೊಂದಿಗೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ದುಬಾರಿಯಾಗುವ ದಿನಗಳು ದೂರವಿಲ್ಲ.
ಪಂಚ ರಾಜ್ಯ ಚುನಾವಣೆಗಳು ಏನಾದರೂ ಇರದಿದ್ದರೆ ಇಷ್ಟೊತ್ತಿಗೆ ವಾಹನ ಸವಾರರ ಮೇಲೆ ಬೆಲೆ ಏರಿಕೆಯ ಬರೆ ಬೀಳುತ್ತಿತ್ತು. ಆದರೆ, ಪಂಚ ರಾಜ್ಯ ಗೆಲ್ಲುವ ಕಸರತ್ತಿನಲ್ಲಿ ತೊಡಗಿರುವ ಕೇಂದ್ರ ಸರ್ಕಾರ, ಮಾರ್ಚ್ ಹತ್ತರವರೆಗೂ ತೈಲ ಬೆಲೆ ಏರಿಕೆ ಮಾಡುವ ಸಂಭವ ಇಲ್ಲ. ಕಳೆದ ಮೂರು ತಿಂಗಳಿಂದ ತೈಲ ದರದಲ್ಲಿ ಯಾವುದೇ ಬದಲಾವಣೆಯನ್ನು ಮೋದಿ ಸರ್ಕಾರ ಮಾಡಿಲ್ಲ. ಎಲ್ಲವನ್ನು ಸೇರಿಸಿ ಏಕ್ ದಮ್ ಪೆಟ್ರೋಲ್ -ಡೀಸೆಲ್ ಬೆಲೆಗಳು ಹತ್ತಿಪ್ಪತ್ತು ರೂಪಾಯಿ ಹೆಚ್ಚಿದರೂ ಆಶ್ಚರ್ಯವಿಲ್ಲ.
ರಷ್ಯಾ ತೈಲ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಎರಡನೇ ಅತಿದೊಡ್ಡ ದೇಶ. ಯುರೋಪ್ ದೇಶಗಳಿಗೆ ಪ್ರಮುಖ ಕಚ್ಚಾ ತೈಲ ಪೂರೈಕೇದಾರ ದೇಶ ರಷ್ಯಾ. ಯುರೋಪ್ ದೇಶಗಳಿಗೆ ಶೇಕಡಾ 35ರಷ್ಟು ನ್ಯಾಚುರಲ್ ಗ್ಯಾಸ್ ಪೂರೈಕೆ ಮಾಡುವ ರಾಷ್ಟ್ರವೂ ಹೌದು.