No Result
View All Result
ಡಿಸೆಂಬರ್ 1 ರಿಂದ ಮೊಬೈಲ್ ಕರೆ ಮತ್ತು ಡಾಟಾ ಪ್ಲಾನ್ ದರ ಶೇಕಡಾ 30 ರಿಂದ ಶೇಕಡಾ 42 ರಷ್ಟು ಹೆಚ್ಚಿಸುವುದಾಗಿ ಭಾರತಿ ಏರ್ ಟೆಲ್, ವೋಡಾಫೋನ್- ಐಡಿಯಾ ಕಂಪೆನಿಗಳು ಪ್ರಕಟಿಸಿವೆ. ಕಳೆದ 4 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದರ ಹೆಚ್ಚಳವಾಗುತ್ತಿದೆ.
ಈಗಿನ ಪ್ಲಾನ್ ಗಳಿಗೆ ಹೋಲಿಸಿದರೆ ಹೊಸ ಪ್ಲಾನ್ ಗಳು ಶೇ.42 ರವರೆಗೆ ದುಬಾರಿಯಾಗಲಿವೆ. ವೋಡಾಫೋನ್ ಗೆ ಹೋಲಿಸಿದರೆ ಏರ್ ಟೆಲ್ ದರಗಳು ಸ್ವಲ್ಪ ಅಗ್ಗವಾಗಿರಲಿವೆ.
ಈ ಎರಡೂ ಕಂಪೆನಿಗಳ ಗ್ರಾಹಕರು ಒಂದು ತಿಂಗಳ ಅವಧಿಗೆ ಚಾಲ್ತಿಯಲ್ಲಿರಲು ಕನಿಷ್ಟ ರೂ 49 ಪಾವತಿಸಬೇಕಾಗುತ್ತದೆ.
ವೋಡಾಫೋನ್ ಗ್ರಾಹಕರು ಬೇರೆ ಕಂಪೆನಿಗಳ ಮೊಬೈಲ್ ನಂಬರ್ ಗೆ ಕಾಲ್ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ತೆರಬೇಕಾಗುತ್ತದೆ.
ಇದೇ ರೀತಿ ಡಿಸೆಂಬರ್ 6ರಿಂದ ರಿಲಯನ್ಸ್ ಜಿಯೋ ಕೂಡ ತನ್ನ ಹೊಸ “ಆಲ್ ಇನ್ ಒನ್” ಪ್ಲಾನ್ನಡಿ ಅನ್ ಲಿಮಿಟೆಡ್ ಮೊಬೈಲ್ ಕರೆ ಮತ್ತು ಡಾಟಾ ಪ್ಲಾನ್ ಸೌಲಭ್ಯ ತರಲಿದೆ.
No Result
View All Result
error: Content is protected !!