ಬಂಟ್ವಾಳ ತಾಲೂಕಿನ ಕಲಾಬಾಗಿಲಿನಿಂದ ಸೇವಾ ಮಜಲುಗೆ ಸಂಪರ್ಕ ಕಲ್ಪಿಸುವ 100 ಮೀಟರ್ ದೂರದ ಸಿಮೆಂಟ್ ರಸ್ತೆ – 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆದಿತ್ತು.
ಜುಲೈ 9ರಂದು ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ರಸ್ತೆಯನ್ನು ಉದ್ಘಾಟಿಸಬೇಕಿತ್ತು.
ಆದರೆ ಶಾಸಕ ರಾಮೇಶ್ ನಾಯ್ಕ್ ಉದ್ಘಾಟನೆಗೂ ಮೊದಲು ಕಾಂಕ್ರಿಟ್ ರಸ್ತೆ ಒಡೆದು ಹೋಗಿ ಪ್ರಯೋಜನಕ್ಕೂ ಬಾರದಂತಿದೆ.
ಇನ್ನೂ ಉದ್ಘಾಟನೆ ಆಗಬೇಕಿರುವ ಕಾಂಕ್ರಿಟ್ ರಸ್ತೆಗೆ ಈ ರೀತಿ ಒಡೆದುಹೋಗಲು ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜುಲೈ 9ರಂದು ಒಂದೇ 3.13 ಕೋಟಿ ರೂಪಾಯಿ ಮೊತ್ತದ 23 ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ಶಾಸಕ ರಾಜೇಶ್ ನಾಯ್ಕ್ ಅವರು ಮಾಡಲಿದ್ದಾರೆ. ಆ ಉದ್ಘಾಟನೆ ಕಾರ್ಯಕ್ರಮಗಳ ಪಟ್ಟಿಯಲ್ಲಿ ಕಲಾಬಾಗಿಲು ಮತ್ತು ಸೇವಾ ಮಜಲಿಗೆ ಸಂಪರ್ಕ ಕಲ್ಪಿಸುವ ಸಿಮೆಂಟ್ ರಸ್ತೆಯೂ ಸೇರಿದೆ.