ಧರ್ಮಸ್ಥಳದಲ್ಲಿ ದಲಿತ ಯುವಕನ ಕೊಲೆಯಾಗಿದೆ. ಈ ಕೊಲೆಗೆ ಭಜರಂಗದಳದ ನಾಯಕನೇ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ಧರ್ಮಸ್ಥಳದ ದಲಿತ ಯುವಕನ ಹತ್ಯೆಕೋರನ ರಕ್ಷಣೆಗೆ ರಜ್ಯ ಸರ್ಕಾರ ನಿಂತಿರುವುದು ಆತ್ಮವಂಚನೆಯ ನಡವಳಿಕೆ ಎಂದು ಟೀಕಿಸಿದ್ದಾರೆ.
ಟ್ವಿಟ್ ಮಾಡಿರುವ ಅವರು, ಧರ್ಮಸ್ಥಳದಲ್ಲಿ ನಡೆದಿರುವ ದಲಿತ ಯುವಕ ದಿನೇಶ್ ಅವರ ಹತ್ಯೆ ಅತ್ಯಂತ ಖಂಡನೀಯ. ಕೊಲೆ ಆರೋಪಿ ಬಜರಂಗ ದಳದ ನಾಯಕನಾಗಿರುವ ಕಾರಣಕ್ಕೆ ಮೃತನ ಕುಟುಂಬ ಆತಂಕಕ್ಕೀಡಾಗಿದೆ. ಪೊಲೀಸರು ರಾಜಕೀಯ ಪ್ರಭಾವಕ್ಕೆ ಮಣಿಯದೆ
ಕೊಲೆ ಆರೋಪಿಯನ್ನು ತಕ್ಷಣ ಬಂಧಿಸಬೇಕು ಮತ್ತು ಮೃತ ಯುವಕನ ಕುಟುಂಬಕ್ಕೆ ರಕ್ಷಣೆ ನೀಡಬೇಕು.
ಹಿಂದುಗಳ ರಕ್ಷಣೆಯ ಮಂತ್ರ ಜಪಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಧರ್ಮಸ್ಥಳದ ದಲಿತ ಯುವಕನ ಹತ್ಯೆಕೋರನ ರಕ್ಷಣೆಗೆ ನಿಂತಿರುವುದು ಆತ್ಮವಂಚನೆಯ ನಡವಳಿಕೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸಾವಿನ ರಾಜಕೀಯ ಮಾಡಲು ಹೋಗದೆ ಮೃತಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿರುವ
ದಲಿತ ಯುವಕ ದಿನೇಶ್ ಅವರ ಹತ್ಯೆ ಅತ್ಯಂತ ಖಂಡನೀಯ.ಕೊಲೆ ಆರೋಪಿ ಬಜರಂಗ ದಳದ ನಾಯಕನಾಗಿರುವ ಕಾರಣಕ್ಕೆ ಮೃತನ ಕುಟುಂಬ ಆತಂಕಕ್ಕೀಡಾಗಿದೆ.
ಪೊಲೀಸರು ರಾಜಕೀಯ ಪ್ರಭಾವಕ್ಕೆ ಮಣಿಯದೆ
ಕೊಲೆ ಆರೋಪಿಯನ್ನು ತಕ್ಷಣ ಬಂಧಿಸಬೇಕು ಮತ್ತು ಮೃತ ಯುವಕನ ಕುಟುಂಬಕ್ಕೆ ರಕ್ಷಣೆ ನೀಡಬೇಕು.
1/2— Siddaramaiah (@siddaramaiah) February 25, 2022
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಯತೀಂದ್ರ ಸಿದ್ದರಾಮಯ್ಯನವರು, ತಮ್ಮ ಕಾರ್ಯಕರ್ತನ ಹತ್ಯೆಯನ್ನು ಹಿಂದೂ ಧರ್ಮದ ಮೇಲೆ ಆದ ದಾಳಿಯೆಂಬಂತೆ ಬಿಂಬಿಸಿದ ಭಜರಂಗ ದಳದವರು, ತಮ್ಮ ಸಂಘಟನೆಯವನೇ ಒಬ್ಬ ದಲಿತ ಯುವಕನ ಕೊಲೆಗೈದಾಗ ಮೌನವಾಗಿರುವುದೇಕೆ. ಧರ್ಮದ ಹೆಸರಿನಲ್ಲಿ ದ್ವೇಷ, ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುವ ಯಾವ ಸಂಘಟನೆಯನ್ನು ನಂಬಬೇಡಿ. ಈ ದಲಿತ ಯುವಕನ ಹಂತಕನಿಗೆ ಬೇಗ ಶಿಕ್ಷೆಯಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 23 ರಂದು ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಕನ್ಯಾಡಿಯ ಕೃಷ್ಣ ಎಂಬ ಬಜರಂಗದಳದ ಮುಖಂಡ ಅದೇ ಗ್ರಾಮದ ದಿನೇಶ್ ಎಂಬ ದಲಿತ ಯುವಕನ ಮೇಲೆ ತೀವ್ರ ರೀತಿಯಲ್ಲಿ ಹಲ್ಲೆ ನಡೆಸಿದ್ದನು. ಆ ದೃಶ್ಯಗಳು ಸಿಸಿಕ್ಯಾಮರದಲ್ಲಿ ದಾಖಲಾಗಿದ್ದು, 45 ಸೆಕೆಂಡ್ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆನಂತರ ಫೆಬ್ರವರಿ 24 ರಂದು ಆಸ್ಪತ್ರೆಗೆ ಸೇರಿಸಲಾಯಿತಾದರೂ ಫೆಬ್ರವರಿ 25 ರಂದು ದಿನೇಶ್ ಸಾವನಪ್ಪಿದ್ದ.
ಈ ಕುರಿತು ಮೃತನ ತಾಯಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದಲಿತ ದೌರ್ಜನ್ಯ ತಡೆ ಕಾಯ್ದೆ, ಕೊಲೆ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಆರೋಪಿಯನ್ನು ಬಂಧಿಸಲಾಗಿಲ್ಲ.