ಮಂತ್ರಾಲಯಕ್ಕೆ ಹೊರಟಿದ್ದ ಆಟೋವೊಂದು ಪಲ್ಟಿ ಹೊಡೆದು ಇಬ್ಬರು ಪ್ರಯಾಣಿಕರು ಸ್ಥಳದಲ್ಲೆ ಸಾವನ್ನಪ್ಪಿದ್ದು ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮಾಧವರಂ ಬಳಿ ನಡೆದಿದೆ.
ದೊಡ್ಡಬಳ್ಳಾಪುರ ಮೂಲದ ರಾಘವೇಂದ್ರ(37) ಹಾಗೂ ಹುಬ್ಬಳ್ಳಿ ಮೂಲದ ಅಭಿಷೇಕ್(27) ಮೃತ ದುರ್ದೈವಿಗಳು. ಬೆಂಗಳೂರಿನಿಂದ ರೈಲಿನ ಮೂಲಕ ಮಂತ್ರಾಲಯಕ್ಕೆ ಬಂದಿದ್ದ ಭಕ್ತರು ರಾಯರ ಮಠಕ್ಕೆ ಆಟೋದಲ್ಲಿ ಹೊರಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ ಹೊಡೆದಿದೆ. ಇದರಿಂದಾಗಿ ಸ್ಥಳದಲ್ಲೇ ರಾಘವೇಂದ್ರ ಹಾಗೂ ಅಭಿಷೇಕ ಅವರು ಮೃತಪಟ್ಟಿದ್ದಾರೆ.
ಮೃತ ರಾಘವೇಂದ್ರ ರೈಲ್ವೆ ಇಲಾಖೆ ಸಿಬ್ಬಂದಿಯಾಗಿದ್ದು, ಯಶವಂತಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸದ ನಿಮಿತ್ತ ಮಂತ್ರಾಲಯಕ್ಕೆ ಬಂದಿದ್ದ ಅವರು, ಭಕ್ತರ ಜೊತೆ ಆಟೋದಲ್ಲಿ ಹೊರಟಿದ್ದಾಗ ಅಪಘಾತದಿಂದ ಸಾವನ್ನಪ್ಪಿದ್ದಾನೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ನಾಲ್ವರನ್ನು ಕರ್ನೂಲು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆ ಮಾಧವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.