ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸುವುದಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಮೇ.೦3 ರ ಗಡುವು ನೀಡಿದ್ದಾರೆ.
ಮೇ.೦1 ರಂದು ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, “ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆಯಲು ಮೇ.03 ರ ಗಡುವು ನೀಡಲಾಗಿದೆ. ಆ ಗಡುವು ಮುಕ್ತಾಯಗೊಂಡು ಬೇಡಿಕೆ ಈಡೇರದೇ ಇದ್ದಲ್ಲಿ ಮುಂದೇನಾಗುತ್ತದೆಯೋ ಅದಕ್ಕೆ ನಾನು ಹೊಣೆಯಾಗಿರುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
ಮೇ.೦4 ರಿಂದ ಹಿಂದೂಗಳು ಹನುಮಾನ್ ಚಾಲಿಸಾವನ್ನು ಮಸೀದಿಗಳ ಧ್ವನಿವರ್ಧಕಗಳಿಗಿಂತಲೂ ಎರಡು ಪಟ್ಟು ಹೆಚ್ಚಿನ ಶಬ್ದದಲ್ಲಿ ಹಾಕಬೇಕು ಎಂದು ಎಂಎನ್ಎಸ್ ಮುಖ್ಯಸ್ಥ ಕರೆ ನೀಡಿದ್ದಾರೆ.
ಮುಸ್ಲಿಮರು ಶಾಂತಿಯುತವಾಗಿ ಹೇಳಿದ್ದನ್ನು ಅರ್ಥ ಮಾಡಿಕೊಳ್ಳದೇ ಇದ್ದಲ್ಲಿ ನಾವು ಅವರಿಗೆ ಮಹಾರಾಷ್ಟ್ರದ ಶಕ್ತಿಯನ್ನು ತೋರಿಸಬೇಕಾಗುತ್ತದೆ ಎಂದು ಠಾಕ್ರೆ ಎಚ್ಚರಿಸಿದ್ದಾರೆ. ಧ್ವನಿವರ್ಧಕಗಳ ಶಬ್ದ ಧಾರ್ಮಿಕ ವಿಷಯವಲ್ಲ ಸಾಮಾಜಿಕ ವಿಷಯ ಎಂದು ಠಾಕ್ರೆ ತಿಳಿಸಿದ್ದಾರೆ.