ದಿವಂಗತ ನಟ ಪುನೀತ್ ರಾಜ್ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದ್ದು, ಈ ಸಿನಿಮಾ ತಂಡದಿಂದ ಬರುವ ಒಂದೊಂದು ಅಪ್ಡೇಟ್ಸ್ ಕೂಡಾ ಸಿನಿಪ್ರಿಯರಿಗೆ ಕುತೂಹಲ ಹುಟ್ಟಿಸುತ್ತಿದೆ. ಇದೀಗ ಸಿನೆಮಾದ ಲಿರಿಕಲ್ ಸಾಂಗ್ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಹೇಳಿಕೊಂಡಿದೆ.
ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ಹಾಡು ಮಾರ್ಚ್ 1 ಕ್ಕೆ ಬಿಡುಗಡೆಗೆಯಾಗಲಿದೆ. ಈ ಸಿನಿಮಾದಿಂದ ರಿಲೀಸ್ ಆಗುತ್ತಿರುವ ಮೊದಲ ಹಾಡು ಇದಾಗಿದೆ. ಬೆಳಗ್ಗೆ 11.11ಕ್ಕೆ ಜೇಮ್ಸ್ ಟ್ರೇಡ್ ಮಾರ್ಕ್ ಹಾಡು ಬಿಡುಗಡೆಯಾಗಲಿದೆ. ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬದ ದಿನ ಸಿನಿಮಾ ತೆರೆ ಮೇಲೆ ಬರಲಿದೆ. ಚೇತನ್ ಕುಮಾರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.
ಜೇಮ್ಸ್ ಸಿನಿಮಾದ ಕುರಿತಾಗಿ ಒಂದೆರಡು ಫೋಟೋಗಳ ಹೊರತಾಗಿ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹಂಚಿಕೊಂಡಿರಲಿಲ್ಲ. ಇದೀಗ ಪುನೀತ್ ರಾಜ್ಕುಮಾರ್ ಅವರ ವಿವಿಧ ಗೆಟಪ್ಗಳ ಫೋಟೋಗಳನ್ನು ರಿಲೀಸ್ ಮಾಡಿದೆ. ಆ ಫೋಟೋದಲ್ಲಿ ಪುನೀತ್ ರಾಜ್ಕುಮಾರ್ ಸೈನಿಕ ಉಡುಪಿನಲ್ಲಿ ಮತ್ತು ಹಾಡುಗಳ ಚಿತ್ರೀಕರಣದ ಫೋಟೋ ಮತ್ತು ಇತರ ಸನ್ನಿವೇಶದ ಭಾವಚಿತ್ರಗಳು ಸದ್ಯ ಅಭಿಮಾನಿಗಳಿಗೆ ಲಭ್ಯವಾಗಿವೆ.
.ಜೇಮ್ಸ್ನಲ್ಲಿ ಪುನೀತ್ ಹಲವು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ ಆನಂದ್ ಪುನೀತ್ಗೆ ನಾಯಕಿಯಾಗಿದ್ದಾರೆ, ಮೆಕಾ ಶ್ರೀಕಾಂತ್, ಚಿಕ್ಕಣ್ಣ, ಶೈನ್ ಶೆಟ್ಟಿ ಹಾಗೂ ತಿಲಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.