ಪೋಕ್ಸೋ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಜಾಮೀನ ಮೇಲೆ ಹೊರಬಂದಿರುವ ಮುರುಘಾ ಮಠದ ಸ್ವಾಮೀಜಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಬಸವ ಪುತ್ಥಳಿ ನಿರ್ಮಾಣದ ಹಣ ದುರುಪಯೋಗ ಮಾಡಿಕೊಂಡಿದ್ದಾರೆಂದು ಚಿತ್ರದುರ್ಗ ಡಿಸಿಗೆ ಮಾಜಿ ಸಚಿವ ಎಚ್.ಏಕಾಂತಯ್ಯ ದೂರು ನೀಡಿದ್ದಾರೆ.

ಮಠದ ಹಿಂಭಾಗದಲ್ಲಿ 28 ಕೋಟಿ 20 ಲಕ್ಷ ವೆಚ್ಚದಲ್ಲಿ ರೂಪಿಸಲಾಗಿರುವ ಬಸವ ಪುತ್ಥಳಿ ನಿರ್ಮಾಣ ಯೋಜನೆಗೆ ಈಗಾಗಲೇ 24 ಕೋಟಿ 50 ಲಕ್ಷ ರೂ. ಖರ್ಚಾಗಿದೆ. ಆದರೆ
ಪುತ್ಥಳಿ ನಿರ್ಮಾಣಕ್ಕೆ ಟೆಂಡರ್ ಕರೆಯದೆ 4 ಕೋಟಿ ಮೌಲ್ಯದ ಕಬ್ಬಿಣ, ಸಿಮೆಂಟ್ ಖರೀದಿಸಿರೋದಲ್ಲದೆ, ನಿಯಮ ಮೀರಿ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿರೋದಾಗಿ ದೂರಲ್ಲಿ ಉಲ್ಲೇಖಿಸಲಾಗಿದೆ. ಇನ್ನು ರಾಜ್ಯ ಸರ್ಕಾರದಿಂದ ಈವರೆಗೆ 35 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಹೀಗಾಗಿ ಈ ದೂರಿನ ಬಗ್ಗೆ ತನಿಖೆ ಮಾಡಿ ಮುರುಘಾಮಠ ಸ್ವಾಮೀಜಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ.