ಮಹೀಂದ್ರಾ ಶೋ ರೂಂನಲ್ಲಿ ರೈತನಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮಹತ್ವದ ಬೆಳವಣಿಗೆ ನಡೆದಿದೆ.
ನಗರದ ಮಹೀಂದ್ರಾ ಅಂಡ್ ಮಹೀಂದ್ರಾ ಎಸ್ ಯುವಿ ಶೋರೂಂನಲ್ಲಿ ಮಾರಾಟ ಸಿಬ್ಬಂದಿಯಿಂದ ರೈತರೊಬ್ಬರು ಅವಮಾನಕ್ಕೊಳಗಾಗಿದ್ದರು.
ಶುಕ್ರವಾರ ರಾಮನಪಾಳ್ಯದ ರೈತ ಕೆಂಪೇಗೌಡ ಅವರಿಗೆ ಮಹೀಂದ್ರಾ ಕಂಪನಿ ಹೊಸ ವಾಹನ ಕಳುಹಿಸಿಕೊಟ್ಟಿದೆ. ಈ ಕುರಿತು ಸ್ವತಃ ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ರೈತ ಕೆಂಪೇಗೌಡರ ಸಂತಸ ಹಂಚಿಕೊಂಡಿದ್ದಾರೆ.
ರೈತ ಕೆಂಪೇಗೌಡ ಅವರಿಗೆ ಮಹಿಂದ್ರಾ ಕಂಪೆನಿಯ ಡೀಲರ್ಗಳು ಅವಮಾನಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಆನಂದ್ ಮಹೀಂದ್ರಾ ಅವರು ಕ್ಷಮೆ ಕೋರಿ, ರೈತ ಕಂಪೇಗೌಡ ಅವರನ್ನು ಮಹೀಂದ್ರಾ ಕುಟುಂಬಕ್ಕೆ ಸ್ವಾಗತಿಸಿದ್ದಾರೆ.
And let me add my welcome to Mr. Kempegowda…🙏🏽 https://t.co/BuKnTNov42
— anand mahindra (@anandmahindra) January 28, 2022
ಹತ್ತು ರೂಪಾಯಿ ಕೊಡುವ ಯೋಗ್ಯತೆ ಇಲ್ಲ ಎಂದು ಅಲ್ಲಿನ ಸಿಬ್ಬಂದಿಗೆ ಕೆಂಪೇಗೌಡ ಅವರಿಗೆ ಅವಮಾನ ಆಗಿತ್ತು. ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ಹಣ ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದರು. ಆಗ ಸಿಬ್ಬಂದಿಯೇ ಕಂಗಾಲಾಗಿದ್ದರು. ವಾಹನ ನೀಡಲು ಮೂರು ನಾಲ್ಕು ದಿನ ಸಮಯ ಕೋರಿದ್ದರು.