ಭಾರತದ ಗಾನ ಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ (92) ಅವರ ಗೌರವಾರ್ಥ ರಾಷ್ಟ್ರದಾದ್ಯಂತ ಎರಡು ದಿನ ಶೋಕಾಚರಣೆ ನಡೆಸಲು ಸರ್ಕಾರ ನಿರ್ಧರಿಸಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲು ಸರ್ಕಾರ ನಿರ್ಧರಿಸಿದೆ.
ಮುಂಬೈ ನಗರದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲತಾ ಮಂಗೇಶ್ಕರ್ ಭಾನುವಾರ ನಿಧನರಾದರು.
ಎರಡು ದಿನ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿರುವುದಾಗಿ ಎಎನ್ಐ ಟ್ವೀಟಿಸಿದೆ. ಕೋವಿಡ್–19 ದೃಢಪಟ್ಟ ಕಾರಣ ಜನವರಿ 8ರಂದು ಲತಾ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಇನ್ನು, ಲತಾ ಮಂಗೇಶ್ಕರ್ ಅಗಲಿಕೆಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಸೇರಿದಂತೆ ದೇಶದ ಗಣ್ಯಾತಿ ಗಣ್ಯರು ದು:ಖ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ. ಲತಾ ದೀದಿ ಅವರು ಅಗಲಿಕೆಯಿಂದ ದೇಶದಲ್ಲಿ ಶೂನ್ಯ ಆವರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.
I am anguished beyond words. The kind and caring Lata Didi has left us. She leaves a void in our nation that cannot be filled. The coming generations will remember her as a stalwart of Indian culture, whose melodious voice had an unparalleled ability to mesmerise people. pic.twitter.com/MTQ6TK1mSO
— Narendra Modi (@narendramodi) February 6, 2022
An artist born but once in centuries, Lata-didi was an exceptional human being, full of warmth, as I found whenever I met her. The divine voice has gone quiet forever but her melodies will remain immortal, echoing in eternity. My condolences to her family and admirers everywhere. pic.twitter.com/FfQ8lmjHGN
— President of India (@rashtrapatibhvn) February 6, 2022
ಭಾರತದಲ್ಲಿ ಅವರನ್ನು ಆರಾಧಿಸುವ ಕೋಟ್ಯಂತರ ಅಭಿಮಾನಿಗಳನ್ನು ಲತಾ ಗಳಿಸಿದ್ದರು. ಅವರು ಭೌತಿಕವಾಗಿ ನಮ್ಮನ್ನು ಅಗಲಿರುವುದು ಇಡೀ ದೇಶವನ್ನೇ ಶೋಕದಲ್ಲಿ ಮುಳುಗಿಸಿದೆ. ದೇವರು ಆ ಅದ್ಭುತ ಕಂಠಸಿರಿಯ ಮಹಾನ್ ಗಾಯಕಿಯ ಆತ್ಮಕ್ಕೆ ಸದ್ಗತಿ ನೀಡಲಿ, ಅವರ ಕುಟುಂಬ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ. (2/2)#LataMangeshkar
— B.S.Yediyurappa (Modi Ka Parivar) (@BSYBJP) February 6, 2022
The sounds of music have fallen silent with #LataDidi's passing away.
Many generations of Indians grew up listening to countless songs in your matchless melodious voice. Om Shanti 🙏🏽#LataMangeshkar pic.twitter.com/Uhwr9p9Hsm
— Basavaraj S Bommai (Modi Ka Parivar) (@BSBommai) February 6, 2022
ಮಧುರ ಕಂಠದ ಮೂಲಕ ದಶಕಗಳಿಂದ ಜನಮನವನ್ನು ರಂಜಿಸಿದ್ದ
ಗಾನಕೋಗಿಲೆ
ಲತಾ ಮಂಗೇಶ್ಕರ್ ಸಾವು ನನ್ನಂತಹ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಆಘಾತಕ್ಕೀಡು ಮಾಡಿದೆ.ನಮ್ಮನ್ನು ಅಗಲಿ ಹೋದರೂ ಅಮರ
ಕಂಠ ಸಿರಿಯ ಮೂಲಕ ನಮ್ಮೊಳಗೆ ಲತಾ ದೀದಿ ಅಜರಾಮರ.ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವೆ.#LataMangeshkar pic.twitter.com/VD4B4d7Mzx
— Siddaramaiah (@siddaramaiah) February 6, 2022