ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ, ತಮ್ಮ ವೃತ್ತಿ ಜೀವನದಲ್ಲಿ 100ನೇ ಟೆಸ್ಟ್ ಪಂದ್ಯ ಆಡುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಅವರ ಈ ಇತಿಹಾಸಿಕ ಪಂದ್ಯವನ್ನ ಪ್ರೇಕ್ಷಕರಿಗೆ ಅವಕಾಶ ನೀಡದೆ ನಡೆಸಲು ಬಿಸಿಸಿಐ ತೀರ್ಮಾನ ಮಾಡಿತ್ತು.. ಇದರಿಂದ ಕೊಹ್ಲಿ 100ನೇ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸದ ಬಿಸಿಸಿಐ ನಿರ್ಧಾರದ ಬಗ್ಗೆ ಅಭಿಮಾನಿಗಳು ಸೇರಿ ಕ್ರಿಕೆಟ್ ಆಟಗಾರರು ವಿರೋಧ ವ್ಯಕ್ತ ಪಡಿಸಿದ್ರು. ಅಭಿಮಾನಿಗಳ ಒತ್ತಡಕ್ಕೆ ಮಣಿದ ಬಿಸಿಸಿಐ ಕೊಹ್ಲಿ 100ನೇ ಟೆಸ್ಟ್ ಪಂದ್ಯಕ್ಕೆ ಅಭಿಮಾನಿಗಳಿಗೆ ಅವಕಾಶ
ಅಭಿಮಾನಿಗಳು ವಿರಾಟ್ ಕೊಹ್ಲಿ ಅವರ ಐತಿಹಾಸಿಕ 100ನೇ ಟೆಸ್ಟ್ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಈ ಟೆಸ್ಟ್ ಪಂದ್ಯವನ್ನು ಸ್ಟೇಡಿಯಂನ ಶೇ. 50 ರಷ್ಟು ಪ್ರೇಕ್ಷಕರ ಸಮ್ಮುಖದಲ್ಲಿ ಆಯೋಜಿಸಲಾಗುವುದು ಎಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಖಚಿತಪಡಿಸಿದೆ.
ಇನ್ನು ಈ ಮೊದಲು, ಬಿಸಿಸಿಐ ಈ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ. ಇದಕ್ಕೆ ಕೊರೋನಾ ಸೋಂಕು ಮತ್ತು ಪಂಜಾಬ್ ಚುನಾವಣೆಯ ಮತಗಳ ಎಣಿಕೆ ಕಾರಣವೆಂದು ಉಲ್ಲೇಖಿಸಲಾಗಿತ್ತು. ಆದರೆ ಇದಕ್ಕೂ ಮೊದಲು, ಧರ್ಮಶಾಲಾದಲ್ಲಿ ನಡೆದ ಎರಡೂ ಟಿ20 ಮತ್ತು ನಂತರ ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ಗೆ ಪ್ರೇಕ್ಷಕರಿಗೆ ಬರಲು ಅವಕಾಶ ನೀಡಲಾಯಿತು.
ಬಿಸಿಸಿಐನ ಈ ನಡೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ 100ನೇ ಟೆಸ್ಟ್ ಪಂದ್ಯವಾಡುತ್ತಿರುವ ಕೊಹ್ಲಿ ವಿಶೇಷ ಪಂದ್ಯವನ್ನು ಸ್ಟೇಡಿಯಂನಲ್ಲೇ ವೀಕ್ಷಿಸಲು ಅನುವು ಮಾಡಿಕೊಡಬೇಕೆಂದು ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಾಯಿಸಲಾಗಿತ್ತು.
ಇದುವರೆಗೂ 100 ಟೆಸ್ಟ್ ಪಂದ್ಯ ಆಡಿದ ಭಾರತೀಯರ ಕ್ರಿಕೇಟಿಗರು :
ಮೊಹಾಲಿಯಲ್ಲಿ ನಡೆಯುವ ಟೆಸ್ಟ್ ಪಂದ್ಯದ ಮೂಲಕ 100 ಟೆಸ್ಟ್ಗಳನ್ನು ಆಡಿದ 11 ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಸಚಿನ್ ತೆಂಡೂಲ್ಕರ್ (200), ರಾಹುಲ್ ದ್ರಾವಿಡ್ (163), ವಿವಿಎಸ್ ಲಕ್ಷ್ಮಣ್ (134), ಅನಿಲ್ ಕುಂಬ್ಳೆ (132), ಕಪಿಲ್ ದೇವ್ (131), ಸುನಿಲ್ ಗವಾಸ್ಕರ್ (125),,ದಿಲೀಪ್ ವೆಂಗ್ಸರ್ಕರ್ (116), ಸೌರವ್ ಗಂಗೂಲಿ (113), ಇಶಾಂತ್ ಶರ್ಮಾ (105), ಹರ್ಭಜನ್ ಸಿಂಗ್ (103), ಮತ್ತು ವೀರೇಂದ್ರ ಸೆಹ್ವಾಗ್ (103) ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.