ಜೈನ ಧರ್ಮದ ಮಹಿಳೆಯರು ತಲೆಗೆ ಸೆರಗು ಹಾಕಲ್ವಾ..? ಹಿಂದೂ ಮಹಿಳೆಯರು ತಲೆಗೆ ಸೆರಗು ಹಾಕಲ್ವಾ ಹಾಗೆಯೇ ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕಲ್ವಾ. ಅದೇ ರೀತಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಹಾಕಿಕೊಳ್ಳಲಿ ಬಿಡಿ. ನಿಮಗೆ ಅದರಿಂದ ತೊಂದರೆ ಏನು..? ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಹೆಣ್ಣುಮಕ್ಕಳು ಸಮವಸ್ತ್ರದ ಬಣ್ಣದ ದುಪ್ಪಟ್ಟಾ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಕೇಳುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ?.
ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕ್ತಾರೆ, ಹಿಂದೂ ಹಾಗೂ ಜೈನ ಮಹಿಳೆಯರು ತಲೆಗೆ ಸೆರಗು ಹಾಕ್ತಾರೆ. ಇವರೂ ಹಾಕಿಕೊಳ್ಳಲಿ. ಇದರಿಂದ ಯಾರಿಗೇನು ತೊಂದರೆ ಇದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ಹಿಜಾಬ್ ವಿವಾದ ಹುಟ್ಟುಹಾಕಿದ್ದೇ ಬಿಜೆಪಿಯವರು. ಎರಡೂ ಧರ್ಮದವರನ್ನು ಕರೆದು ಚರ್ಚಿಸಿ ವಿವಾದಕ್ಕೆ ತೆರೆ ಎಳೆಯಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿ ದೊಡ್ಡದಾಗಿಸಿದ್ದಾರೆ ಎಂದರು.
ಇನ್ನು, ಹಿಂದೂಗಳ ಜಾತ್ರೆಗಳಲ್ಲಿ ಮುಸ್ಲಿಮರಿಗೆ ನಿರ್ಬಂಧ ವಿಧಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಡಿಸಿರುವ ಅವರು, ಇದು ಅಮಾನವೀಯ ಕ್ರಮ. ಬಿಜೆಪಿಯವೇ ಕೆಲವು ಸಂಘಟನೆಗಳ ಮೂಲಕ ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.