2000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಆರ್ಬಿಐ ಸ್ಥಗಿತಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀಸಾಮಾನ್ಯರಲ್ಲಿ ಉದ್ಭವಿಸಬಹುದಾದ ಹಲವು ಸಂದೇಹಗಳನ್ನು, ಪ್ರಶ್ನೋತ್ತರಗಳ ಮೂಲಕ ನಿವಾರಣೆ ಮಾಡುವ ಪ್ರಯತ್ನವನ್ನು ಆರ್ಬಿಐ ಮಾಡಿದೆ.
1. ಕ್ಲೀನ್ನೋಟ್ ಪಾಲಿಸಿ ಎಂದರೇನು?
ಜನರಿಗೆ ಒಳ್ಳೆಯ, ಉತ್ಕೃಷ್ಟ ಗುಣಮಟ್ಟದ ನೋಟುಗಳನ್ನು ಒದಗಿಸುವುದು
2. 2000 ರೂ. ನೋಟುಗಳನ್ನು ಈಗ ಚಲಾವಣೆ ಮಾಡಬಹುದೇ?
ಹೌದು.. 2000 ರೂ. ನೋಟುಗಳನ್ನು ಚಲಾವಣೆ ಮಾಡಬಹುದು
3. ಈ ನೋಟುಗಳನ್ನು ನಮ್ಮ ಅಗತ್ಯಗಳಿಗೆ ಬಳಸಿಕೊಳ್ಳಬಹುದೇ?
ಹೌದು.. ನಿಮ್ಮ ಅಗತ್ಯಗಳಿಗೆ ಬಳಸಿಕೊಳ್ಳಬಹುದು.. ಯಾರು ಕೊಟ್ಟರೂ ತೆಗೆದುಕೊಳ್ಳಬಹುದು.. ನೀವು ಕೂಡ ಕೊಡಬಹುದು.
4. 2000 ರೂ. ನೋಟು ಇರುವವರು ಏನು ಮಾಡಬೇಕು?
ಸೆಪ್ಟೆಂಬರ್ 30ರ ಒಳಗಾಗಿ ಅವುಗಳನ್ನು ಬ್ಯಾಂಕ್ನಲ್ಲಿ ಡೆಪಾಸಿಟ್ ಮಾಡುವುದೋ? ಅಥವಾ ವಿನಿಮಯ ಮಾಡಿಕೊಳ್ಳುವುದೋ ಮಾಡಬೇಕು..ಇದನ್ನು ನಾವು ಪ್ರೋತ್ಸಾಹಿಸುತ್ತೇವೆ.
5. 2000 ರೂ. ನೋಟುಗಳ ಠೇವಣಿಗೆ ಮಿತಿ ಎನ್ನುವುದಿದೆಯೇ?
ಅಂತಹ ಯಾವುದೇ ಮಿತಿ, ನಿರ್ಬಂಧಗಳನ್ನು ಆರ್ಬಿಐ ವಿಧಿಸಿಲ್ಲ. ಆದರೆ, ಕೆವೈಸಿ ಮತ್ತು ಇತರೆ ಕಾನೂನು ಬದ್ಧ.. ಬ್ಯಾಂಕ್ ನಿಯಮಗಳನ್ನು ಪೂರೈಸಿದಲ್ಲಿ ನೀವು ಯಾವುದೇ ಬ್ಯಾಂಕ್ನಲ್ಲಿ ಡಿಪಾಸಿಟ್ ಮಾಡಬಹುದು..
6.2000 ರೂ. ನೋಟುಗಳ ವಿನಿಮಯಕ್ಕೆ ಮಿತಿ ಎನ್ನುವುದಿದೆಯೇ?
ಪ್ರಜೆಗಳು ಪ್ರತಿಬಾರಿಯೂ 20ಸಾವಿರ ಮೌಲ್ಯದ 2000 ರೂ. ನೋಟುಗಳನ್ನು ಬ್ಯಾಂಕ್ನಲ್ಲಿ ವಿನಿಮಯ ಮಾಡಿಕೊಳ್ಳಬಹುದು.
7. ಬ್ಯುಸಿನೆಸ್ ಕರೆಸ್ಪಾಂಡೆಂಟ್ ಮೂಲಕ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದೇ?
ಖಾತೆದಾರ ನಿತ್ಯ ನಾಲ್ಕು ಸಾವಿರ ರೂಪಾಯಿವರೆಗೂ ಬ್ಯುಸಿನೆಸ್ ಕರೆಸ್ಪಾಂಡೆಂಟ್ಗಳ ಮೂಲಕ ವಿನಿಮಯ ಮಾಡಿಕೊಳ್ಳಬಹುದು
8. ವಿನಿಮಯ ಸೌಲಭ್ಯ ಯಾವ ದಿನದಿಂದ ಜಾರಿ ಆಗಲಿದೆ?
ಮೇ 23ರಿಂದ ಸೆಪ್ಟೆಂಬರ್ 30ರವರೆಗೂ ಎಲ್ಲಾ ಬ್ಯಾಂಕ್ಗಳು, 19 ಆರ್ಬಿಐ ಪ್ರಾದೇಶಿಕ ಕಚೇರಿಗಳಲ್ಲಿ ನೋಟುಗಳ ವಿನಿಮಯಕ್ಕೆ ಅವಕಾಶ ಇರುತ್ತೆ.
9. ಬ್ಯಾಂಕ್ನಲ್ಲಿ ವಿನಿಮಯ ಮಾಡಿಕೊಳ್ಳಲು ಖಾತೆ ಹೊಂದಿರಲೇಬೇಕಾ?
ಹಾಗೇನಿಲ್ಲ.. ನಿಮ್ಮ ಖಾತೆ ಹೊಂದಿಲ್ಲದಿದ್ದರೂ 2000 ರೂ. ನೋಟುಗಳನ್ನು ಬ್ಯಾಂಕ್ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು.
10. ವ್ಯಾಪಾರ ಮತ್ತು ಇತರೆ ಅಗತ್ಯಗಳಿಗಾಗಿ ಯಾರಿಗಾದರೂ 20ಸಾವಿರಕ್ಕೂ ಅಧಿಕ ನಗದು ಅಗತ್ಯ ಬಿದ್ದರೇ?
ಯಾವುದೇ ಮಿತಿಗಳು ಇಲ್ಲದೇ 2000 ರೂ. ನೋಟುಗಳನ್ನು ನಿಮ್ಮ ಖಾತೆಯಲ್ಲಿ ಜಮೆ ಮಾಡಬಹುದು. ಒಮ್ಮೆ ಜಮೆ ಮಾಡಿದ ನಂತರ ಅದರಲ್ಲಿರುವ ಮೊತ್ತದ ಆಧಾರದ ಮೇಲೆ ನಗದು ವಿತ್ ಡ್ರಾ ಮಾಡಬಹುದು.
11. ನೋಟು ವಿನಿಮಯಕ್ಕೆ ಶುಲ್ಕ ಪಾವತಿ ಮಾಡಬೇಕಾ?
ಯಾವುದೇ ಶುಲ್ಕ ಪಾವತಿ ಮಾಡುವ ಅಗತ್ಯವಿಲ್ಲ. ಈ ಪ್ರಕ್ರಿಯೆ ಉಚಿತವಾಗಿ ನಡೆಯುತ್ತದೆ.
12. ನೋಟುಗಳ ವಿನಿಮಯಕ್ಕಾಗಿ ವಿಶೇಷಚೇತನರು, ವೃದ್ಧರಿಗೆ ವಿಶೇಷ ಸೌಲಭ್ಯಗಳು ಇವೆಯಾ?
ಅಂಥವರಿಗೆ ಯಾವುದೇ ತೊಂದರೆ ಆಗದಿರುವ ರೀತಿ ಅಗತ್ಯ ಕ್ರಮ ತೆಗೆದುಕೊಳ್ಳಲು ಬ್ಯಾಂಕ್ಗಳಿಗೆ ಸೂಚಿಸಲಾಗಿದೆ.
13. ಒಂದು ವೇಳೆ ಯಾರಾದರೂ ತಕ್ಷಣವೇ 2000 ರೂ. ನೋಟುಗಳನ್ನು ಡಿಪಾಸಿಟ್ ಮಾಡದಿದ್ದಲ್ಲಿ, ವಿನಿಮಯ ಮಾಡಿಕೊಳ್ಳದಿದ್ದಲ್ಲಿ ಏನಾಗುತ್ತದೆ?
ಜನರಿಗೆ ತೊಂದರೆ ಆಗದಿರುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ಅದಕ್ಕೆಂದೇ ನಾಲ್ಕು ತಿಂಗಳ ಸಮಯ ನೀಡಲಾಗಿದೆ.ಈ ಗಡುವು ಮುಗಿಯುವುದರೊಳಗೆ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು
14. 2000 ರೂ. ನೋಟುಗಳ ಠೇವಣಿ/ವಿನಿಮಯಕ್ಕೆ ಬ್ಯಾಂಕ್ಗಳು ಅವಕಾಶ ನೀಡದಿದ್ದರೇ ಏನು ಮಾಡಬೇಕು?
ಬ್ಯಾಂಕ್ ಸೇವೆಗಳಲ್ಲಿ ಲೋಪ ಕಂಡುಬಂದಲ್ಲಿ ಮೊದಲು ಬ್ಯಾಂಕ್ ಸಂಪರ್ಕಿಸಬೇಕು. ದೂರು ನೀಡಿದ 30 ದಿನದಲ್ಲಿ ಬ್ಯಾಂಕ್ ಸ್ಪಂದಿಸದಿದ್ದಲ್ಲಿ ಅಥವಾ ಬ್ಯಾಂಕ್ ಉತ್ತರ ತೃಪ್ತಿಕರವಾಗದಿದ್ದಲ್ಲಿ ಆರ್ಬಿಐ ಇಂಟಿಗ್ರೇಟೆಡ್ ಅಂಬುಡ್ಸ್ಮನ್ ಸ್ಕೀಂ ಯೋಜನೆಯಡಿ ಆರ್ಬಿಐ ಪೋರ್ಟಲ್ನಲ್ಲಿ ದೂರು ದಾಖಲು ಮಾಡಬಹುದು