ಸಾಲ ವಂಚನೆ: ಅನಿಲ್‌ ಅಂಬಾನಿಗೆ ಮತ್ತೆ ED ಶಾಕ್

ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ (Bank Fraud Case) ರಿಲಯನ್ಸ್‌ ಅನಿಲ್‌ ಅಂಬಾನಿ ಗ್ರೂಪ್‌ (Reliance Anil Ambani Group) ಕಂಪನಿಗೆ ಸೇರಿದ 3,083 ಕೋಟಿ ರೂಪಾಯಿ ಮೊತ್ತದ 42 ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (Enforcement Directorate (ED) ಜಪ್ತಿ ಮಾಡಿಕೊಂಡಿದ್ದಾರೆ.

ಇವುಗಳಲ್ಲಿ ರಿಲಯನ್ಸ್‌ ಇನ್ಫ್ರಾಸ್ಟ್ರಕ್ಷರ್‌ ಲಿಮಿಟೆಡ್‌ಗೆ (Reliance Infrastructure Limited) ಸೇರಿದ 30 ಆಸ್ತಿಗಳು, ಆಧಾರ್‌ ಪ್ರಾಪರ್ಟಿ ಕನ್ಸಲ್‌ಟೆನ್ಸಿ ಪ್ರೈವೇಟ್‌ ಲಿಮಿಟೆಡ್‌ಗೆ (Adhar Property Consultancy Private Limited) ಸೇರಿದ 5 ಆಸ್ತಿಗಳು, ಮೋಹನ್‌ಬಿರ್‌ ಹೈ ಟೆಕ್‌ ಬಿಲ್ಡ್‌ ಪ್ರೈವೇಟ್‌ ಲಿಮಿಟೆಡ್‌ಗೆ (Mohanbir Hi-tech Build Private Limited) ಸೇರಿದ 4 ಆಸ್ತಿಗಳು ಮತ್ತು ಗಮೇಸ ಇನ್‌ವೆಸ್ಟ್‌ಮೆಂಟ್‌ ಮ್ಯಾನೇಜ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ Gamesa Investment Management Private Limited),  ವಿಹಾನ್‌೪೩ ರಿಯಾಲ್ಟಿ ಪ್ರೈವೇಟ್‌ ಲಿಮಿಟೆಡ್‌ (Vihaan43 Realty Private Limited) ಮತ್ತು ಕ್ಯಾಪಿಯಾನ್‌ ಪ್ರಾಪರ್ಟಿಸ್‌ ಲಿಮಿಟೆಡ್‌ಗೆ (Campion Properties Limited) ಸೇರಿದ ತಲಾ 1 ಆಸ್ತಿ ಸೇರಿದೆ.

ಇವುಗಳಲ್ಲಿ ಮುಂಬೈನಲ್ಲಿರುವ ಅನಿಲ್‌ ಅಂಬಾನಿಗೆ (Anil Ambani) ಸೇರಿದ ಪಾಲಿ ಹಿಲ್‌ ನಿವಾಸ (Pali Hill Residence), ನವದೆಹಲಿಯ (New Delhi) ಮಹಾರಾಜ ರಂಜಿತ್‌ ಸಿಂಗ್‌ ರಸ್ತೆಯಲ್ಲಿರುವ ರಿಲಯನ್ಸ್‌ ಸೆMಟರ್‌ ಕಟ್ಟಡ (Reliance Center), ದೆಹಲಿ (Delhi), ಗಾಜಿಯಾಬಾದ್‌ (Gaziyabad), ಮುಂಬೈ (Mubai), ಪುಣೆ (Pune), ಥಾಣೆ (Thane), ಹೈದ್ರಾಬಾದ್‌ (Hyderbad), ಕಾಂಚೀಪುರಂ (Kancheepuram), ನೋಯ್ಡಾ (Noida), ಪಶ್ಚಿಮ ಗೋದಾವರಿ (West Godavari) ನಗರಗಳಲ್ಲಿರುವ ಇತರೆ ಆಸ್ತಿಗಳೂ ಸೇರಿವೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ (State Bank Of India) ರಿಲಯನ್ಸ್‌ ಕಮ್ಯೂನಿಕೇಷನ್‌(RCOM)ನಿಂದಾಗಿರುವ ಸಾಲ ವಂಚನೆ ಮತ್ತು ಆರ್‌ಸಿಎಫ್‌ಎಲ್‌ (RCFL) ಹಾಗೂ ಆರ್‌ಎಚ್‌ಎಫ್‌ಎಲ್‌(RHFL)ನಿಂದ ಯೆಸ್‌ ಬ್ಯಾಂಕ್‌ಗೆ (Yes Bank) ಮಾಡಲಾಗಿರುವ ಸಾಲ ವಂಚನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ((Enforcement Directorate (ED) ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ತನಿಖೆಗೆ ಆದೇಶ

ಗಿರೀಶ್‌ ಮಟ್ಟಣ್ಣನವರ್‌ (Girish Mattannanavar) ವಿರುದ್ಧ ಮೂರು ವಾರಗಳಲ್ಲಿ ತನಿಖೆ ನಡೆಸುವಂತೆ...

ಭೂತಾನ್‌ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Prime Minister Narendra Modi) ಇವತ್ತಿನಿಂದ...

ಹಾಸನದ ಜನಪ್ರಿಯ ಆಸ್ಪತ್ರೆ ಮಾಲೀಕ ಡಾ.ಅಬ್ದುಲ್‌ ಬಶೀರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು

ನ್ಯಾಯಾಲಯಕ್ಕೆ ಸುಳ್ಳು ಸಾಕ್ಷ್ಯ ಮತ್ತು ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದಡಿಯಲ್ಲಿ ಹಾಸನ...

ದೆಹಲಿ ಕೆಂಪುಕೋಟೆ ಬಳಿ ಸ್ಫೋಟ – 8 ಸಾವು

ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿರುವ ಕಾರ್‌ ಬಾಂಬ್‌ ಸ್ಫೋಟದಲ್ಲಿ 8 ಮಂದಿ ಪ್ರಾಣ...